Friday 6 August 2021

ಮಧ್ವರಾಯರಿಗೆ ನಮೋ ನಮೋ ಮಾಯವಾದಿಗಳ ಮತವ ಸೋಲಿಸಿ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಮಧ್ವರಾಯರಿಗೆ ನಮೋ ನಮೋ ಪ


ಮಾಯವಾದಿಗಳ ಮತವ ಸೋಲಿಸಿ

ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ ಅ.ಪ


ದೈತ್ಯ ರಾವಣಗೆ ಹಲವು ಭೀತಿ ತೋರಿಸಿ

ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು 1


ಮಂದ ಜರಾಸಂಧನಂಗವ ಸೀಳಿ

ತಂದ ಕಪ್ಪವನ್ನು ಬಂದು ಧರ್ಮಗಿತ್ತ 2


ಕುಜನಾದಿಗಳ ನಿಜವಚನದಿ ಸೋಲಿಸಿ

ವಿಜಯ ರಾಮಚಂದ್ರವಿಠಲ ಸರ್ವೋತ್ತಮನೆನಸಿದ 3

***


No comments:

Post a Comment