..
ನೋಡಿದೆ ಗುರುರಾಯರನ್ನ ಈ
ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ
ಥಳಥಳಿಸುವ ಬೃಂದಾವನದಿ - ತಾನು
ಕುಳಿತು ಭಕ್ತರಿಗೀವ ವರವನು ತ್ವರದಿ
ನಳಿನನಾಭನ ಕೃಪಾಬಲದಿ - ಇದೆ
ನಳಿನಜಾಂಡದಿ ಸರಿಗಾಣೆ ಮಹಿಮಾದಿ1
ಪೊಳೆವೊ ವಕ್ಷಸ್ಥಳದವನ - ಎಳೆ
ತುಳಸಿ ಮಾಲಾಂಕಿತ ಕಂಧರಯುತನಾ
ನಳಿನಾಕ್ಷಮಾಲೆ ಶೋಭಿತನ - ಉರ
ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2
ಕೃಷ್ಣವರ್ಣದಿ ಶೋಭೀತನಾ - ಮಹಾ
ವೈಷ್ಣವ ಕುಮುದ - ನಿಕರಕೆ ಚಂದಿರನಾ
ವಿಷ್ಣು ಭಕ್ತಾಗ್ರೇಸರನಾ - ಬಾಲ
ಕೃಷ್ಣಮೂರುತಿ ಪದಯುಗ ಸರೋಜ ಇನಾ 3
ದಿನನಾಥ - ದೀಪ್ತಿ - ಭಾಸಕನ - ಭವ
ವನಧಿ - ಸಂತರಣ - ಸುಪೋತಕೋಪÀಮನಾ
ಮುನಿಜನ ಕುಲದಿ ಶೋಭಿಪನ - ಸ್ವೀಯ
ಜನರ ಪಾಲಕ ಮಹಾರಾಯನೆನಿಪನಾ 4
ಗುರುಜಗನ್ನಾಥ ವಿಠಲನ - ಪಾದ
ಸರಸಿಜ ಯುಗಳಕಾರಡಿ ಎನಿಪÀನಾ
ಪೆರಿವೋನು ತನ್ನ ಜನರನಾ - ಎಂದು
ಶಿರಸದಿ ನಮಿಸಿ ಬೇಡಿದೆ ಗುರುವರನಾ 5
***
No comments:
Post a Comment