Wednesday, 1 September 2021

ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಪ  


ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1 

ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2 

ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3 

ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4 

ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5

***


No comments:

Post a Comment