Wednesday, 25 August 2021

ಬಂದು ಮುಖವ ತೋರಿದಾ ಶ್ರೀ ಬಾಲಕೃಷ್ಣಾ ankita indiresha BANDU MUKHAVA TORIDA SRI BALAKRISHNA


 

ಬಂದು ಮುಖವ ತೋರಿದಾ ಶ್ರೀ ಬಾಲಕೃಷ್ಣಾ ll ಪ ll


ಬಂದು ತೋರಿದ ಮುಖ ವಿಂದು ಸಂಸ್ಕಾರವ

ಪೊಂದಿ ಮನದಿ ಸದಾsಮಂದ ಚಿಂತಿಸಲೆಂದು ll ಅ ಪ ll


ಫಣಿಯು ವಿಸ್ತೃತವಿಹುದು ಮುಖವು ದುಂಡು l

ವನಜನಂಥೊಳಿಯುವುದು ll

ಸುನಸವು ಚಂಪಕ ತೆನೆಯಂತೆ ಶೀತಮುಕ್ತಾ l

ಮಣಿ ಮಾಲಿಯಂದದಿ ಮಿನುಗುತಿಹದು ರದಾ ll 1 ll


ಪವಳ ಶೋಣಿತ ತುಟಿಯು ದರ್ಪಣ ಕಾಂತಿ l

ನಿವಹದಂದದಿ ಗಂಡವು ll

ಶಿವರಿಪು ಬಿಲ್ಲಿನ ಛವಿಯಂತೆ ಭ್ರೂಚಿತ್ರ l

ಶ್ರವಣತನಕ ರೇಖಾ ಭುವನಜ ನಯನವು ll 2 ll


ಎಂದು ಕಾಣದ ವಸ್ತುವು ಸಂಸ್ಕಾರವ l

ಪೊಂದಲಾರದೀ ತನುವು ll

ಎಂದು ಚಿಕುರ ಮುಖಾವಿಂದು ತೋರಿಸಿ ಮನ l

ಪೊಂದುತಿರಲೂ ಪಾದ ಇಂದಿರೇಶ ಕೃಷ್ಣಾ ಬಂದು ತೋರಿದ. ll 3 ll

***


No comments:

Post a Comment