Sunday, 1 August 2021

ಇಂದು ಕಂಡೆನು ಹರಿಯ ಭವಹಾರಿಯ ಇಂದು ಕಂಡೆನು ಕಂಬದಿಂದಲಿ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಇಂದು ಕಂಡೆನು ಹರಿಯ | ಭವಹಾರಿಯ

ಇಂದು ಕಂಡೆನು ಕಂಬದಿಂದಲಿ ಪ


ಬಂದು ದೈತ್ಯನ ಕೊಂದು ಕಂದನಿ-

ಗಂದು ಒಲಿದಾನಂದ ಸಾಂದ್ರನ

ಇಂದಿರಾ ಮಂದಿರನ ವಂದ್ಯನ ಅ.ಪ.


ಎಂದಿನಂದದಿ ಬರುತ | ಮನದಲಿ ಶ್ರೀ ಮು-

ಕುಂದ ನಾಮವ ನೆನೆಯುತ

ಮುಂದು ಮುಂದಕೆ ನಡೆಯುತ | ಆ-

ನಂದದಿ ಹೋಗುತಲಿರೆ

ಸುಂದರಿ ಶ್ರೀ ತುಲಸಿಗೊಲಿದು

ಬೃಂದೆಯನು ಕರವಿಡಿದು ಪೊಳೆದು

ಬಂದು ಗಂಡಕಿಯಿಂದ ಭಕ್ತರ

ವೃಂದ ಪೊರೆಯಲು ಪಥದಿ ನಿಂದನ1

***


No comments:

Post a Comment