Friday, 6 August 2021

ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು ನಿಲ್ಲುವರಯ್ಯಾ ankita mahanidhi vittala

 ..

kruti by ಮಹಾನಿಧಿವಿಠಲರು mahanidhi vittalaru


ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು

ನಿಲ್ಲುವರಯ್ಯಾ ಈ ಜಗತ್ರಯದಿ ಪ


ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ.


ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ

ದನುಜಾಂತಕ ರಾಘವನ ಸೇವೆ ಮನದಣಿಯೆ

ಮಾಡಿ ದುರಂಧರನೆನಿಸಿದೆ 1


ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ

ಧುರದಲಿ ಅಷ್ಟು ವೀರರಿದ್ದು ಬಿಡಿಸಿಕೊಳ್ಳಲಾರದೆ

ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2


ಗುರುಮಧ್ವರಾಯಾ ದ್ವೈತವನು ಸಿದ್ಧಾಂತವ

ಮಾಡಿ ಅದ್ವೈತ ಮತವ ಗೆದ್ದು

ಮಾನಿಧಿವಿಠಲನ ಸೂಸಿ ಪೂಜಿಸಿ ಮೆರೆದೆಯಾ

ಮದ್ಗುರು ಮುನಿಮೌನಿರಾಮಾ 3

***


No comments:

Post a Comment