Monday, 6 September 2021

ಮಾಂ ಪಾಹಿ ಗುರು ರಾಘವೇಂದ್ರ ತುಂಗಾತೀರ ankita gurushyamasundara

 .ರಾಗ: [ದುರ್ಗಾ] ತಾಳ: [ಆದಿ]


ಮಾಂ ಪಾಹಿ ಗುರು ರಾಘವೇಂದ್ರ


ತುಂಗಾತೀರ ವಿಹಾರ ಭಕ್ತ

ಭೃಂಗ ಸಂಗೀತ ಲೋಲ

ಭಂಗ ಪಡಿಸುತ ದುಷ್ಟಜಾಲ

ರಂಗನೊಲಿಸಿಹ ಪ್ರಹ್ಲಾದರಾಯ ಮಾಂ ಪಾಹಿ 1

ತರ್ಕತಾಂಡವದಿ ಮೆರೆದ ವೀರ ಕು-

ತರ್ಕವಾದಿಗಳ ಗೆಲಿದ ಶೂರ

ಅರ್ಕಸಮ ಭವ್ಯ ತೇಜ

ಶಕ್ತಶ್ರೀವ್ಯಾಸರಾಜ ಮಾಂ ಪಾಹಿ 2

ಪರಿಮಳಾಚಾರ್ಯ ಗುರುವೆ ನಿನ್ನ

ಕರುಣವನೆ ತೋರೆನಗೆ ಸುರಕಲ್ಪತರುವೆ

ಶರಣರ ಪೊರೆವಲ್ಲಿ ತಡವೇಕೊ ಸ್ವಾಮಿ

ಗುರುಶಾಮಸುಂದರನು ನಿನ್ನಂತರ್ಯಾಮಿ 3

***


No comments:

Post a Comment