ಬಂದು ಭಕ್ತಿಯಲಿಂದ ಇಂದಿರೆ ರಮಣನ
ಚರಣಕ್ಕೊಂದನೆ ಮಾಡಿರೋ
ಸಂದೇಹವಿಲ್ಲದೆ ಸಲಹುವ ತಾನು
ಸುಂದರಾಂಗನು ಚಂದಿರವದನನು||ಪಲ್ಲ||
ಪಾದದಿ ಪಾಗಡ ಋಳಿ ಗೆಜ್ಜೆಕಟ್ಟಿದ
ಮೋದಭರಿತನು,ಮೇಧಿನಿಪತಿಯಿವ
ಕಾದು ಕೊಂಡಿಹ ತನ್ನ ಭಕ್ತರ ಸಲಹುವ
ಯಾದವರೊಡೆಯ ಯದುಕುಲ ತಿಲಕ||೧||
ಹರಿದಾಸರನುದಿನ ಹಾಡಿಹೊಗಳುವ
ಪರಮಪಾವನಮೂರ್ತಿಶ್ರೀಹರಿಯ
ಕರಿಯ ಕರೆಗೆ ಬಂದ ಕರುಣಾಮಯನು
ಕಾರುಣ್ಯ ಮೂರ್ತಿ ಶ್ರೀಕೃಷ್ಣನ \\೨\\
ರಮೆಯರಸನ ಧ್ಯಾನ ಸುಮನಸದಲಿ
ಮಾಡೆಕಮನೀಯ ಮೂರ್ತಿ ತಾನೊಲಿವ
ಅಮರರಿಂದೊಂದಿತ ಭುವನಾದಿಪತಿಯು
ಆದರದಲಿ ಭಜಿಸೆಅನುಗ್ರಹಿಸುವನು||೩||
ನಿತ್ಯ ತೃಪ್ತನು ತನ್ನಭಕ್ತರ ಸಲಹುವ
ಸತ್ಯಭಾಮೆಯ ಪತಿ ಸಾರ್ವಭೌಮ
ಅತ್ಯಂತ ವಿನಯದಿ ತೃಪ್ತಿ ಪಡುವನು
ಭಕ್ತರ ಮಾತಿಗೆ ಕತೃಪತಿಯ||೪||
ಸರ್ವ ಕಾಲಗಳಲ್ಲು ಸರ್ವ ದೇಶಗಳಲ್ಲು
ಸನ್ನಿಹಿತನಾಗಿರುವ ಸರ್ವಶಕ್ತ
ಸರುವರ ಆಧಾರಿ ಸರಸಿಜದಳನೇತ್ರ
ಸರುವರಿಂದೊಂದಿತ ಮಧ್ವೇಶ ಕೃಷ್ಣ ||೫||
********
No comments:
Post a Comment