Tuesday, 13 April 2021

ಬಂದ ಹರಿ ನಾರಸಿಂಹ ಶ್ರೀಹರಿ ನರಸಿಂಹ ankita varahahari vittala

ಬಂದ ಹರಿ ನಾರಸಿಂಹ l ಶ್ರೀಹರಿ ನರಸಿಂಹ ll ಪ ll


ಛಂದದಿಂದ ಕಂಬ ಒಡೆದು ಬಂದ ಗೋವಿಂದ ll ಅ ಪ ll


ದುರುಳ ಹಿರಣ್ಯಕ l  ತರುಳನ ಥಳಿಸುತ l

ಹರಿಯ ತೋರೆನುತ ಕಂಬವ ತಾಡಿಸೆ  l

ಕರಿವೈರಿಯ ತೆರ ಮೋರೆಯ ತೋರುತ l

ಸರ ಸರ ಬಂದನು ಸ್ಥಂಬಾರ್ಭಕನು ll 1 ll


ಹಾರುತ ಚೀರುತ ದುರುಳರು ಸರಿಯಲು l

ಉರಿಯುವ ಕಣ್ಣನು ಬಿರಬಿರನೆ ಬಿಡುತ l

ದುರುಳನ ಉರದಲಿ ಎಳೆಯುತ ಹಾಕಿ l

ಕರುಳು ಬಗೆದು ಕೊರಳಲಿ ಧರಿಸಲು ll 2 ll


ಸುರರೆಲ್ಲರು ನಿಂತು ಪರಿಪರಿ ಸ್ತುತಿಸಲು l

ಪೋರನ ಸ್ತುತಿಗೆ ಶಾಂತನಾಗುತಲಿ l

ಸಿರಿಯನು ಕೂಡುತ ವರಾಹಹರಿವಿಟ್ಠಲ l

ಧರೆಯಲಿ ನಿಂತನು ಭಕುತರ ಹರಸಲು ll 3 ll

***


No comments:

Post a Comment