Monday 6 September 2021

ಕಂಡೆ ಕಂಡೆ ರಾಯರ ನಾ ಕಂಡೆ ಕಂಡೆ ankita pandarinatha vittala

  ankita ಪಂಡರೀನಾಥವಿಠಲ

ರಾಗ: ಭೈರವಿ  ತಾಳ: [ಮಿಶ್ರನಡೆ]


ಕಂಡೆ ಕಂಡೆ ರಾಯರ ನಾ ಕಂಡೆ ಕಂಡೆ   ಪ


ಕಂಡೆ ಕಂಡೆನು ರಾಘವೇಂದ್ರರ

ದಂಡ ನಮನವ ಮಾಡಿ ದಣಿದೆನು

ದಂಡ ಕಮಂಡಲದಿ ಮೆರೆಯುವ

ಹಿಂಡು ಭಕ್ತರ ಕಂಡು ಕಾಯ್ವರ  ಅ ಪ


ಚೆಂದ ಬೃಂದಾವನದೊಳಿರುವರ

ಕುಂದುರಹಿತ ಸುಧೀಂದ್ರಕರಜರ

ತಂದೆ ಶ್ರೀಪತಿಭಜಕ ಭವ್ಯರ

ಮಂದಮತಿ ಯೆನ್ನನ್ನು ಕಾಯ್ವರ   1

ತುಳಸಿ ಮಾಲೆಯ ಧರಿಸಿ ಮೆರೆವರ

ಜಲಜನಾಭನ ಮೆಚ್ಚಿಸಿಪ್ಪರ

ಅಲವಬೋಧ ಮತ ಉದ್ಧಾರಕ

ಒಲಿದು ಸೇವೆಗೆ ವರಗಳಿಪ್ಪರ   2

ಹಲವು ಮಹಿಮೆಯ ತೋರುತ್ತಿಪ್ಪರ

ಒಲವಿನಿಂದಲಿ ಕರೆಯೆ ಬರುವರ

ಸುಲಭ ಸುಂದರ ವ್ಯಾಸರಾಯರ

ನಳಿನ ನಾಭನ ಕರುಣಪಾತ್ರರ   3

ದೈತ್ಯನುದರದಿ ಬಂದ ಶ್ರೇಷ್ಠರ

ಸ್ತುತ್ಯರಾದರ ಶಿಶು ಪ್ರಹ್ಲಾದರ

ಮಿಥ್ಯಜ್ಞಾನವ ಖಂಡಿಸಿ ಹರಿ

ಸತ್ಯ ಸರ್ವೋತ್ತಮನು ಎಂದರ  4

ಕರುಣಸಾಗರ ಕೀರ್ತಿವಂತರ

ಪರಮಶಾಂತರು ತಪಿಸಿ ಗುರುಗಳ

ಧರಣಿಯೊಳು ಮಂಚಾಲೆಲಿಪ್ಪರ

ದಾಸ ಪಂಢರಿನಾಥವಿಠಲನ   5

***


No comments:

Post a Comment