Monday, 2 August 2021

ಭೂಮಿಗೆ ಧನ್ಯ ನಾನಾದೆ ಜಗದ ವಳಗೆ ankita sirigovinda vittala

ಭೂಮಿಗೆ ಧನ್ಯ ನಾನಾದೆ ಜಗದ ವಳಗೆ

ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ


ಮುಕುಟ ಮಂಡಿತ ದಿನಪ

ಪ್ರಕರ ಸನ್ನಿಭ ಶಿರದಿ

ಮಕರಂದ ಮಯವಾದ

ಶಿಖದ ಸೊಬಗು ಅಕಳಂಕಮಾದ ಫಾಲಕೆ

ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ

ಸುಖದ ದ್ವಯದ್ರಿಕ ಕಂಡು 1


ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ

ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ

ವರಕದಪಯುತ ವದನ ಕೊರಳು ಉರುಬಲದ ಭುಜ

ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು 2


ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು

ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ

ನಟಿಸುವ ಪಾದದ ಕಠಿಣ ಸಂಸಾರ ಸಂಕಟ

ಕಳೆವ ರಜಕಂಡು 3

****

 

No comments:

Post a Comment