Wednesday, 1 September 2021

ಬಿಡು ಬಿಡು ವಣಮಾತಿನ ಸೊಗಸು ಕುಡಿ ಸ್ವಾನಂದ ಬಳ್ಳಿಯ ಚಿಗಿಸು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಿಡು ಬಿಡು ವಣಮಾತಿನ ಸೊಗಸು | ಕುಡಿ ಸ್ವಾನಂದ ಬಳ್ಳಿಯ ಚಿಗಿಸು ಪ 


ಶೃತಿ ಶಾಸ್ತ್ರಜ್ಞಾನವ ಪಡೆದು | ಕ್ಷಿತಿಯೊಳು ಹೆಮ್ಮೆಯ ಮದ ಜಡಿದು | ಪ್ರತಿಯನಗಿಲ್ಲೆನುತಲಿ ನುಡಿದು | ಮತವಾದಕ ನಿಲುವರೆ ನಡದು 1 

ಅಂಜನಿಲ್ಲದ ಉಪಕರಣದಂತೆ | ವ್ಯಂಜನಿಲ್ಲದ ಪಾಕಗಳಂತೆ | ರಂಜನಿಗನುಭವ ದೂರಂತೆ | ಕಂಜನಾಭನ ನೆನೆವಂತೆ 2 

ತನ್ನೊಳು ನಿಜಘನದಾವರತಾ | ಮುನ್ನಾದನು ಶಬ್ದಕ ಹೊರತಾ | ಇನ್ನಾರ ಬೆರಿ ಸಂತರ ತ್ವರಿತಾ | ಮನ್ನಿಸಿ ಮಹಿಪತಿಜನಗುರುತಾ 3

***


No comments:

Post a Comment