Friday, 3 December 2021

ಏತರ ಕಟಪಟಿ ಒಂದಿನ ಹೋಗುತಿದ್ದೆ ಲಟಪಟಿ purandara vittala ETARA KATIPITI ONDINA HOGUTIDDE LATAPATI



ರಾಗ ಕಾಪಿ. ಆದಿ ತಾಳ

ಏತರ ಕಟಪಟಿ ಒಂದಿನ
ಹೋಗುತಿದ್ದೆ ಲಟಪಟಿ ||

ಬರೋವಾಗ್ಗೆ ಏನು ತಂದೆ
ಬರುತಲೆ ಎಲ್ಲಾನು ನನ್ನದೆಂದೆ
ದುಡ್ಡು ಕೂಡಿಟ್ಟು ಬಳಿದು ಹೋಗುವಾಗ
ಬಳಲಿ ಬಳಲಿ ಅಳುಮಾರಿಗೆ ಬಂದೆ ||

ದೊಡ್ಡ ಮನೆಯ ಕಟ್ಟಿ ಅದರೊಳು
ಮಡದಿಯ ಒಯ್ದಿಟ್ಟೆ
ಮಡದಿಗೆ ಮೋಹದ ಮಗು ಒಂದು ಹುಟ್ಟಿ
ಅದರ ಮೇಲೆ ನೀ ಮನಸಿಟ್ಟೆ ||

ಸಂಸಾರ ಬಲು ಖೊಟ್ಟಿ
ಅದರೊಳು ಬಿದ್ದಿದ್ದಿ ಕಾಲ್ಕಟ್ಟಿ
ತಂದೆ ಪುರಂದರವಿಠಲರಾಯನ
ಧ್ಯಾನವನ್ನೆ ಮರೆತು ಬಿಟ್ಟೆ ||
***

pallavi

etara kaTapaTi ondina hOgutidde laTapaTi

caraNam 1

bhavarOgakke Enu tande barutale ellAnu nannadende duDDu
kUDiTTu baLidu hOguvAga baLasi baLasi aLumArige bandi

caraNam 2

doDDa maneya kaTTi adaroLu maDadiya oidiTTi maDadige
mOhada magu ondu huTTi adara mEle nI manasiTTi

caraNam 3

samsAra balu ghoTTi adaroLu biddiddi kAl kaTTi
tande purandara viTTalarAyana dhyAnavanne maredu biTTi
***

No comments:

Post a Comment