ಎತ್ತ ಪೋದನಮ್ಮ, ವಿಪ್ರನ
ಎಲ್ಲಿ ಹುಡುಕಲಮ್ಮ ||ಪ||
ಮುತ್ತಿನ ಮೂಗುತಿ ಮುಕ್ತಿಲಿ ಬ್ರಾಹ್ಮಣ
ಇಕ್ಕೊ ಈಗಲೆಂದು ಮಾಯವಾದನು ||ಅ||
ಪಂಢರಪುರವಂತೆ, ಅಲ್ಲಿ
ಪಾಂಡುರಂಗನಂತೆ
ತಂಡತಂಡದಿ ಹರಿ ಕೀರ್ತನೆ ಮಾಡುತ
ಕಂದನ ಲಗ್ನಕೆ ಪೋಗಬೇಕೆನುತ ||
ಅಂದಿನ ದಿನದಲ್ಲಿ, ನಾರಿಯ
ಕಂಭಕ್ಕೆ ಕಟ್ಟಿರಲು
ಮಂದರೋದ್ಧರನ ಮೊರೆಯಿಟ್ಟು ಕೂಗಲು
ಬಂಧನ ಬಿಡಿಸಿ ಮುಕುತಿಯ ಕೊಟ್ಟನು ||
ಪತ್ನಿಪತಿಯರ ಕೂಡಿ, ಬಹಳ
ಅನ್ನದಾನ ಮಾಡಿ
ಕನಕಾಭರಣವನೀಯನು ಪತಿವ್ರತೆ
ಪುರಂದರವಿಠಲನ ಪಾದ ಸೇರಿದಳು ||
***
ರಾಗ ಸುರುಟಿ. ಆದಿ ತಾಳ (raga tala may differ in audio)
pallavi
etta pOdanamma viprana elli huDukalamma
anupallavi
muttina mUguti muktili brAhmaNa ikkoo Igalendu mAyavAdanu
caraNam 1
paNDharapuravante alli pANduranganante daNDadaNDadi
hari kIrtane mADuTa kandana lagnake pOgabEkenuta
caraNam 2
andina dinadalli nAriya kambhakke kaTTiralu mandarOddharna
moreyiTTu kUgalu bandhana biDisi mukutiya koTTanu
caraNam 3
patni patiyara kUDi bahaLa annadAna mADi kanakA-
bharaNavanIyanu pativrate purandara viTTalana pAda EridaLu
***
No comments:
Post a Comment