ankita ಶ್ರೀಶಕೇಶವವಿಠಲ
ರಾಗ: ನಾಯಕಿ ತಾಳ: ಅಟ
ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವ
ಗುರು ರಾಘವೇಂದ್ರರಾಯರ ಚಾರುಚರಣವ ಪ
ವರಹದಂಷ್ಟ್ರಜಲಸುತ್ಸರಿತತೀರದಿನಿಂದು
ಶರಣರ ದುರಿತವತರಿದು ಕಾಯ್ವನೆಂದು 1
ಕರವಮುಗಿದು ಬಂದ ಪರಮಪಾಮರರಾ
ಪೊರೆವ ಕರುಣಕೃಪಾಕರ ಯತಿವರರ 2
ಶ್ರೀಶಕೇಶವವಿಠಲೇಶನದೂತ-
ರಾಸೆಪೂರೈಸುವ ಗುಣನಿಧಿ ಸತತ 3
***
No comments:
Post a Comment