ankita ಶ್ರೀಶಕೇಶವವಿಠಲ
ರಾಗ: ಸಾವೇರಿ ತಾಳ: ಆದಿ
ಗುರುವೆ ಕರುಣದಿಂದ ನೊಡೋ ನಿನ್ನ
ತರಳನೆಂದು ದಯಮಾಡೊ ಪ
ದುರುಳರೊಳತಿದುರುಳ ನರ ನಾ
ಮೊರೆಯ ಪೋಗುವೆನು ಪೊರೆಯೊ ಅಸ್ಮದ್ಗುರುವೆ ಅ.ಪ
ಸುಧೀಂದ್ರಕರಕಂಜಜಾತ ಈ ವ-
ಸುಧೆಯೊಳು ಪರಮಪ್ರಖ್ಯಾತ
ಸದಮಲ ಶುಭಗುಣನಿಧಿ ನಿರ್ಮಲಜ್ಞಾನ-
ಪ್ರದಪ್ರೇರಕನಾಗಿ ಮದಡಮತಿಯ ಬಿಡಿಸೊ
ಪದುಮನಾಭನ ಪದಪದುಮ ಪದೋಪದೆಗೆ
ಹೃದಯದಿ ಮುದದಿ ಧೇನೀಪ ಮುದಮುನಿಮತಉದಧಿಗೆಚಂದ್ರ 1
ಪಂಚಬಾಣನ ನಿರಾಕರಿಸಿ ಪಂಚ-
ಪಂಚಕರಣವ ಸ್ವೀಕರಿಸಿ
ಪಂಚಮುಖನೆ ಪರನೆಂಬ ವಾದಿಯ ಮತ
ಮುಂಚೆ ಮುರಿದನೆಂದು ಸಂಚಕಾರವ(?) ಪಿಡಿದು
ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ ಸರ್ವಜನ ಮನೋ
ವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ 2
ದೇಶದೇಶದಿ ತವಕೀರ್ತಿ ತುಂಬಿ
ಸೂಸಿಪರಿವುದೆಂಬವಾರ್ತಿ
ಲೇಸಾಗಿ ಕೇಳಿ ಬಂದಾಸುಜನರ ಮನ-
ದ್ಹಾಸೆ ಪೂರೈಸು ವಿಶೇಷಫಲವ ನಿತ್ಯ
ಮಾಸರೊಜ ವ್ಯೋಮಕೇಶಾಮರೇಶ ಮುಖರಿಗೆ
ಈಶನೆನಿಸುವ ಶ್ರೀಶಕೇಶವವಿಠಲನದಾಸಾ ತುಂಗಾನಿವಾಸ 3
***
No comments:
Post a Comment