Monday, 6 September 2021

ವರದಾಯಕ ಮಂತ್ರಾಲಯ ಗುರುವರ ಮಾಂ ಪಾಹಿ ankita raghunayaka

ankita ರಘುನಾಯಕ/ರಘುರಾಮ (ಅನೇಕ)

ರಾಗ: ಭೂಪಾಳಿ ತಾಳ: ರೂಪಕ


ವರದಾಯಕ ಮಂತ್ರಾಲಯ ಗುರುವರ ಮಾಂ ಪಾಹಿ


ಶರಣಾನತ ಪದ ಪಾವನ ರಘುವರ ಪದ ಮೋಹಿ ಅ. ಪ


ಯತಿ ಭಾಸ್ಕರ ಕೃಪಯಾಕರ ಮುನಿಮಾನಿತ ದಾತ

ನುತ ಭೂಸುರ ಚರಿತಾಮೃತ ಭಕ್ತಾರ್ಚಿತ ಪ್ರೀತ

ಧೃತದಂಡ ಕಮಂಡಲ ಕರ ದುರಿತಾದ್ರಿ ವಿಜೇತ

ಹಿತರಂಜನ ಭವಭಂಜನ ಮಹಿಮಾವನ ತ್ರಾತ 1

ಬೃಂದಾವನ ಜಗಪಾವನ ಜನಮೋಹನ ತಾನ

ಬೃಂದಾರಕ ವೃಂದಾಶ್ರಮ ಮಂತ್ರಾಲಯ ಮೌನ

ಇಂದೀವರ ಸಶ್ಯಾಮಲ ಉದ್ಯಾನ ನಿದಾನ 

ಚಂದ್ರೇಕ್ಷಣ ರಿಪುವಾರಣ ಸಿಂಹಾದ್ಭುತ ಬಾಣ 2

ರೋಗಾಹರ ನಾಗಾಧಿಪ ರೂಪಾಧೃತ ಶಕ್ತಿ

ನಿಗಮಾಗಮ ಧರ್ಮಂಚರ ಪರಿಪಾಲ ವಿರಕ್ತಿ

ಅಘನಾಶನ ನತಪಾಲನ ವೈಷ್ಣವಕುಲ ಕೀರ್ತಿ

ರಘುನಾಯಕ ಭಜನಾಮೃತ ಹೃದಯಾಮಲ ಮೂರ್ತಿ 3

***



No comments:

Post a Comment