Wednesday, 1 September 2021

ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ ಸದ್ಧರ್ಮದಲಿ ಸತತ ankita shyamasundara

 ..

ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ

ಶುದ್ಧಮನವನು ಕೊಟ್ಟು | ನೀಲ ಲೋಹಿತ ವಿಗತ

ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ

ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ

ಕೊಂಡ ಮೇತೌಷಧವನಿತ್ತು 1


ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು

ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ

ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ

ಪಂಚಭೇದ ಜ್ಞಾನವನರುಹಿ 2


ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ

ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ

ಸುಚರಿತ್ರ | ಹೈಮವತಿ ಕಳತ್ರ | ತಾಮರಸ

ಭವಪುತ್ರ ಧವಳಗಾತ್ರ 3

***


No comments:

Post a Comment