..
ಗುರುರಾಯರ ತೂಗೋ ಬಾಗೋ
ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ
ತೊಟ್ಟಿಲು ಕಟ್ಟೇವ | ಮೆಟ್ಟಲು ಮಾಡೇದ
ಮಟ್ಟಲು ಮಾಡೇದ
ತರತರದ ಹೂಗಳು ಸುತ್ತ | ತರ ತರದ ಹೂಗಳು ಸುತ್ತ
ಸುವಾಸನೆ ಮತ್ತ | ತುಂಬ ಇಡಗಿತ್ತ
ಪರಿಮಳಾರ್ಯರ ಬಳಿ ಸಾಗೇದ 1
ವರಮಧ್ವಶಾಸ್ತ್ರ ವಿಸ್ತರಿಸಿ | ವರಮಧ್ವಶಾಸ್ತ್ರ ವಿಸ್ತರಿಸಿ
ಜರಿದ ಮಾಯ್ಗಳಾಗ ಮೆರೆದ ಭೂಮಿಯೊಳಗ
ಮೆರದ ಭೂಮಿಯೊಳಗ |
ತರತಮ ಸ್ಥಾಪಿಸುತ್ತ | ತರತಮ ಸ್ಥಾಪಿಸುತ್ತ
ಮರುತ ನಿದ್ಧಾಂತ ತ್ವರಿತ ಗುಣವಂತ
ಭರದಿ ಗುರು ಚರಣಕೆ ಬಾಗೋ2
ನಮಿಸುತಲಿ ಸಾಗೋನೀ ಬೇಗ | ನಮಿಸುತಲಿ
ಸಾಗೋನೀ ಬೇಗ |
ಕರವ ಮುಗಿ ಹೋಗಿ | ವರವ ಬೇಡೀಗ
ವರವ ಬೇಡೀಗ ವರವ ಬೇಡೀಗ
ನಾಮಾಮೃತವ ಸವಿಯುತ್ತ | ನಾಮಾಮೃತವ ಸವಿಯುತ್ತ
ಕುಣಿಯೋ ಮತ್ತೆ | ಮಣಿಯ ಬಾಗುತ್ತ
ಬಾಗುತ್ತ | ಮೆಣಿಯೆ ಬಾಗುತ್ತ
ಶಾಮಸುಂದರನ ಪ್ರಿಯಗೀಗ 3
***
No comments:
Post a Comment