..
ಕೈಲಾಸದಾಶೆಯಲ್ಲಿಹುದೊಶೈಲೇಂದ್ರಸುತೆಯರಸ ಶಿವನ ಒಲವಿಲ್ಲದವಗೆ ಪ
ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆವರಧರ್ಮಪಥವ ಮರೆದವಗೆದುರುಳರನೆ ಪೊರೆದು ಪರಸತಿಯ ನೆರೆದವಗೆ 1
ದೀನಜನರೊಡನಾಡಿ ಹೀನಕರ್ಮವ ಮಾಡಿಆನೆಂಬ ಮಮತೆಯನೆ ಕೂಡಿದಾನವನೆ ಬೇಡಿ ದುರ್ದಾನಕೆ ಮರುಳಹಗೆ 2
ಅನಾಚಾರಂಗಳ ಬಿಡÀದೆ ಮನೆಗೆ ಬಂದರು ಕೊಡದೆಧನದ ಗಂಟುಗಳನು ಕಡಿಯದೆಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ 3
ವಾದಿರಾಜನ ನುಡಿಯ ಹಿತವೆಂದು ಲಾಲಿಸದೆಕ್ರೋಧಮಯನಾಗಿ ದೂಷಿಪಗೆಪಾದಕೆರಗದೆ ಜನನಿಯನಾದರಿಸದವಗೆ 4
ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದುದಯವುಳ್ಳವರ ದೈವನೆನದೆ ಈಸ್ವಯಂಭು ಲಿಂಗದ ಕಲ್ಲೇ ದೈವವೆಂಬುವಗೆ 5
***
No comments:
Post a Comment