..
ತಿರುಪತಿವಿಠಲರ ಹಾಡು
ದಾಸರಾಯರ ನೋಡಿದ್ಯಾ | ಶ್ರೀಶ ಪ್ರಾಣೇಶ |ದಾಸರಾಯರ ನೋಡಿದ್ಯಾ ||ದಾಸರಾಯರ ಪಾದಾಶ್ರಯವ ಮಾಡಲು |ದೋಷಗಳೋಡಿಸಿ ಶ್ರೀಶನೊಲಿಸಿ ಕೊಡುವ ಪ
ಸ್ನಾನದಿ ಮಹಮಂತ್ರವ | ನಿತ್ಯದಿ ಮಾಡಿ |ಜ್ಞಾನಪೂರ್ವಕ ಜಪವು ||ದ್ಯಾನದಿ ಬಿಂಬನ ಹವಣಿ ಮನದಿಂದ |ಮೌನದಿ ಪೂಜಿಸ್ವಾನಂದದೊಳಿರುವಂಥ 1
ಸತತ ಶ್ರೀ ಹರಿಯ ನಾಮ | ಸ್ಮರಣೆಯೊಳು |ರತರಾಗಿಕೊಂಡು ಪ್ರೇಮ ||ಗತಿಗೆ ನೀನೆ ಜಗತ್ಪತಿಯೆಂದು ನಿಶ್ಚಯ |ಮತಿವುಳ್ಳ ಮಹಿಮನ ತುತಿಸುವ ಗುರುಗಳ 2
ಮೊದಲರ ಪದ್ಧತಿಯ | ತಿಳಿದು ಮಾಡೆ |ಪದುಮನಾಭನ ಸೇವೆಯು ||ಪದ ಸುಳಾದಿಗಳರ್ಥ | ಮುದದಿ ಕೇಳುತ ಜಗ |ದುದರ ತಿರುಪತಿ ವಿಠಲನ್ನೆನದು ನಲಿವ ಮುದ್ದು 3
***
No comments:
Post a Comment