Sunday, 1 August 2021

ದಾಸರಾಯರ ಚರಣಕಮಲ ಭಜಿಸೋ ankita shreeshapranesha vittala gurupranesha dasa stutih

 ..

kruti by shreeshapranesha vittala dasaru


ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ


ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1


ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2


ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3

***


No comments:

Post a Comment