" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ತಿಪ್ಪಾದಾಸರು ( ಶ್ರೀ ಕೃಷ್ಣದಾಸರಿಗೆ ) ನೀಡಿದ ಅಂಕಿತ ನಾಮ" - " ಶ್ರೀ ಹಯಗ್ರೀವ ವಿಠ್ಠಲ "
ರಾಗ : ಕಾಂಬೋಧಿ ತಾಳ : ಝಂಪೆ
ಹಯಗ್ರೀವ ವಿಠ್ಠಲ ನಿನ್ನವನೆಂದು
ಕಾಯಬೇಕಿವನ ।। ಪಲ್ಲವಿ ।।
ಮಾಯಪತಿಯೇ ನಿನಗೆ
ಸತತ ಅಭಿವಂದಿಪೆನು ।। ಅ . ಪ ।।
ಬಾದರಾಯಣ ಇವಗೆ
ಬಂದ ಬಾಧೆಗಳ ಪರಿಹರಿಸಿ ।
ಮೇದಿನಿಯೊಳಗೆ ಬಹು
ಕೀರ್ತಿವಂತನ ಮಾಡಿ ।
ಬೋಧತೀರ್ಥರ ಮತದಿ
ಪೂರ್ಣ ಭಕುತಿಯ ಕೊಟ್ಟು ।
ಆದರದಿ ಕಾಯ್ದುದೋ
ಅಮರೇಶವಂದ್ಯಾ ।। ಚರಣ ।।
ನಿನ್ನವನು ಇವನೆಂದು
ಚೆನ್ನಾಗಿ ಪ್ರಾರ್ಥಿಸಿದೆ ।
ಸಣ್ಣವನಲಿ ಇದ್ದ
ಅಜ್ಞಾನವ ಬಿಡಿಸಿ ।
ಘನ್ನ ಸುಜ್ಞಾನ ವಿರಾಗಿ
ಮಾರ್ಗವ ತೋರಿ ।
ಚೆನ್ನಾಗಿ ಪಾಲಿಸುವುದೋ
ಘನ್ನ ಮಹಿಮಾ ।। ಚರಣ ।।
ಪಂಚ ರೂಪಾತ್ಮಕನೆ
ದ್ವಿಪಂಚಕರಣದೊಳಿದ್ದು ।
ಪಂಚಭೇದ ತಾರ-
ತಮ್ಯವನ್ನು ತಿಳಿಸಿ ।
ಪಂಚಮುಖನೈಯ್ಯ ಶಿರಿ
ಮುದ್ದುಮೋಹನವಿಠ್ಠಲ ।
ಸಂಚಿತಾಗಮಿಗಳ ಪರಿಹರಿಸೋ
ಧೊರೆಯೇ ।। ಚರಣ ।।
****
No comments:
Post a Comment