Saturday, 1 May 2021

ಭಾರತೀ ರಮಣ ನಾ ಸಾರುವೆ ಚರಣ ankita gurujagannatha vittala ankita upadesha varadendra vittala dasa + stutih

 ಗುರು ಜಗನ್ನಾಥದಾಸರು- ಈ ಕೀರ್ತನೆಯ ಕೊನೆಯ ಚರಣದಲ್ಲಿ ತಮ್ಮ ನಾಲ್ಕು ಜನ ಶಿಷ್ಯರ ಅಂಕಿತವನ್ನು ಹೆಸರಿಸಿ ತಮ್ಮ ಮುದ್ರಿಕೆಯೊಂದಿಗೆ ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು ಚಮತ್ಕಾರಿಕವಾಗಿ ಸಮನ್ವಯ ಮಾಡಿ ಸರಳ - ಸುಂದರವಾಗಿ ಅಂಕಿತ ಪದ ರಚಸಿ ಮಂತ್ರೋಪದೇಶ ಕೊಟ್ಟು ಹರಿದಾಸ ಸಾಹಿತ್ಯವನ್ನು ಮುಂದುವೆರೆಸಿಕೊಂಡು ಹೋಗಲು ಆಜ್ಞಾಪಿಸಿದ್ದಾರೆ.

ankita upadesha


ಭಾರತೀರಮಣ ನಾ 

ಸಾರುವೆ ಚರಣ ।

ತೋರೋ ಮನ್ಮನದಲಿ 

ಭೂರಿಸುಕರುಣ ।। ಪಲ್ಲವಿ ।।


ನಾರಾಯಣಾ೦ಕದಿ 

ಕುಳಿತಿಹ ಶೂರ ।

ಸೂರಿ ಸ್ತೋಮ ತೇಜ-

ರಂಜಿಪುದುದಾರ ।

ಮಾರಮಣನಾಜ್ಞದಿಂ 

ಬ್ರಹ್ಮಾಂಡಾಧಾರ ।

ಧಾರಕಾನಂದ 

ವಿಠಲನ್ನ ಚಾರ ।। ಚರಣ ।।


ಮರುಳ ರಕ್ಕಸತತಿ

ದ್ವಾರದ ವಿದಾರ ।

ಹರಿ ರಘುವರನ ಪಾದ 

ಶರಧಿಜ ಚಕೋರ ।

ಹರ ಮುಖ್ಯ ಸುರ 

ಸರಸೀರುಹಕೆ ದಿನಕರ ।

ವರದೇಶವಿಠಲನ್ನ 

ಸ್ಮರಿಪ ಸಮೀರ ।। ಚರಣ ।।


ಕುರು ಕುಲ ಸಂಜಾತ 

ದ್ರುಪದಜಾ ನಾಥ ।

ದುರ್ಯೋಧನನ ಊರು 

ಕಡಿದ ನಿರ್ಭೀತ ।

ಪರಮ ಭಗವದ್ಭಕ್ತ 

ವೃಂದ ಸುಪ್ರೀತ ।

ವರದೇಂದ್ರವಿಠಲನ್ನ 

ಪ್ರಿಯ ಸುತರಾತ ।। ಚರಣ ।।


ಅದ್ವೈತ ಮತ ತಿಮಿರ

ಧ್ವಂಸನ ಧೀರ ।

ಶುದ್ಧ ವೈಷ್ಣವ ಮತ 

ಸ್ಥಾಪನಾಚಾರ್ಯ ।

ಸದ್ವಾಕ್ಯದಿಂದಲಿ 

ಹರಿಪಾರಾದಾರ ।

ಮಧ್ವ ಸುಂದರವಿಠಲನ್ನ 

ಸುಕುಮಾರ ।। ಚರಣ ।।


ವರದೇಶ ವರದೇಂದ್ರ-

ವಿಠಲ । ಸುಂ ।

ದರ ಆನಂದವಿಠಲನ್ನ ।

ಪರಿ ಪರಿ ವಿಧದಲಿ 

ಕರುಣವ ಪಡೆದಿಹ ।

ಗುರು ಜಗನ್ನಾಥವಿಠಲನ 

ನಿಜ ದೂತ ।। ಚರಣ ।।

****


No comments:

Post a Comment