Saturday, 1 May 2021

ವೃಂದಾವನ ಸೇವೆ ನಿಂದು ಮಾಡಿರೋ ankita janardhana vittala tulasi stutih

 ಶ್ರೀ ತುಲಸೀ ಸ್ತುತಿ

ರಚನೆ. ಶ್ರೀ ತಿರುಮಲ ದಾಸರು

ಅಂಕಿತ. ಶ್ರೀ ಜನಾರ್ದನ ವಿಠಲ

ಉಪದೇಶ ಗುರುಗಳು. ಶ್ರೀ ಗುರು ಗೋಪಾಲ ದಾಸರು

ರಾಗ ಶಂಕರಾಭರಣ

ತಾಳ ಆದಿ


ವೃಂದಾವನ ಸೇವೆ ನಿಂದು ಮಾಡಿರೋ

ವೃಂದಾವನ ಸೇವೆ ಛೆಂದ ದಿಂದಲಿ ಮಾಡಿ

ನಂದ ವೈಕುಂಠ ಪಾದ ಮುಂದೆ 

ನಿಂದಿರುವಾದು  !! ಪಲ್ಲವಿ !!


ಪತಿವ್ರತೆ ಯರು ಸುತ ಸೌಖ್ಯ ಬೇಕೆಂಬಾರು

ನತ ರಾಗಿ ನಯದಿಂದ ಮಿತಿ ಕಾಲವ ತಿಳಿದು !! 1 !!


ಜಲಂಧರ ನೆಂಬೋ ದೈತ್ಯ ಪರಮೇಷ್ಟಿ ಯಿಂದಲಿ

ವರ ಪಡೆದು ಸತಿಯ ಳ ಪರಿಚರಿ ಏಕಾಂತದ  !! 2 !!


ಹರಿಯೇ ಅವನ ರೂಪದಲಿ ಬಂದು ಹರುಷದಿ

ವರ ವೃತ ಕೆಡಿಸಿ ವರವಾ ಪಾಲಿಸಿದಾ ನೆಂದು !! 3 !!


ತುಲಸೀ ಯುಕ್ತವಾಗಿ ನೆಲಸಿ ಮನೆಗಳಲ್ಲಿ

ಅಲಸಾದೆ ಅಮೃತಾರಾ ವಿಲಾ ಸದಿ ಮಾಳ್ಪ ನೆಂದು !!4!!


ಗಂ ಗಾದಿ ತೀರ್ಥ ಕ್ಷೇತ್ರಗಳು ಮೂಲಾ ಮದ್ಧ್ಯಾ

ತುಂಗಾ ಜನಾರ್ದನ ವಿಠಲಾಗ್ರದಿರುವ ನೆಂದೂ !!5!!

****

No comments:

Post a Comment