Thursday, 5 August 2021

ಕರ್ಮನಾಮಕ ಧರ್ಮಕಾರಿ ನಿರ್ಮಮನ ಮಾಡೆನ್ನ ankita jayesha vittala

  ..

ಕರ್ಮನಾಮಕ ಧರ್ಮಕಾರಿ ಪ


ನಿರ್ಮಮನ ಮಾಡೆನ್ನ ನಿರ್ಮಮರ ದೊರೆ ಹರಿಯೆ ಅ.ಪ


ಸೂರಿಗಳ ಹೃದಯಾಬ್ಜ ಸೂರ್ಯ ಸುಂದರಮೂರ್ತಿ

ನಾರಿಲಕ್ಷ್ಮೀ ವಕ್ಷ ಭೂರಿ ಕರುಣಿ

ಮೀರಿಹ ಅಹಂe್ಞÁನ ತಿಮಿರವನು ಪರಿಹರಿಸು

ಮಾರಮಣ ಮಾಂ ರಕ್ಷ ರಕ್ಷಿಸು ದಯವನಧಿ 1


ಬಂಧನದಿ ನೀನಿಡಲು ಅಜ ರುದ್ರ ಸುರರೆಲ್ಲ

ವಂದಿಸಲು ಬಧಿರರಂತಿರುವರಯ್ಯ

ಹಿಂದು ಮುಂದೆಂದೆಂದು ಎನ್ನಲ್ಲಿ ನೀ ಕುಣಿಸಿ

ದಂದದಲಿ ನಾ ಕುಣಿದೆ ಅರ್ಪಿತವಾಗಲಿ ನಿನಗೆ 2


ಮೋಚಕನೆ ಜಯೇಶವಿಠಲನೆ ವಿಧಿವಂದ್ಯ

ಯಾಚಿಪೆನು ವಿe್ಞÁನ ಕರುಣಿಸೆಂದು

ಊಚುನೀಚದಿ ನಿನ್ನ ಪೂರ್ಣ ಮೂರ್ತಿಯ ಮಹಿಮೆ

ಗೋಚರಕೆ ಬರುವಂತೆ ಆಚರಿಸು ಎನ್ನಲ್ಲಿ3

***

No comments:

Post a Comment