Wednesday, 16 October 2019

ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ ankita vijaya vittala

ವಿಜಯದಾಸ
ಪಾಲಿಸೆನ್ನನು ದೇವಾ ಪರಮ ಪುರುಷಾ
ಶ್ವೇತ ವರಹಾ ಪ

ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು
ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ
ಜಯಜಯದೇವನಾಶ್ರಯ ಕಾಮಧೇನು ನೀ
ದಯಮಾಡಿ ನೋಡುವದು ದಾಸ ನೆನೆಸುವದು 1

ಪರಾಕು ಬೊಮ್ಮಾಂಡವನು
ಹೊತ್ತು ನಸುನಗು ನಾಗಾರಿಗಮನಾ
ಮಣಿ ಮಯದಾಭರಣದಿಂದೆಸೆವ ದೇ
ವೋತ್ತಮನೆ ದಾನವರ ಬಲವಳಿದಾ ಧೈರ್ಯ 2

ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು
ಪ್ರತ್ಯಕ್ಷವಾಗಿ ವರಗಳನೀವುತ
ಸಿರಿ ವಿಜಯವಿಠ್ಠಲ ವರಹ
ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ3
*********

No comments:

Post a Comment