Friday, 6 August 2021

ಹ್ಯಾಗೆ ಬರುವ ವೇದ ವೇದ್ಯ ನಾಗವೇಣಿ ಶುಕವಾಣಿ ಸಖಿ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಹ್ಯಾಗೆ ಬರುವ ವೇದ ವೇದ್ಯ

ನಾಗವೇಣಿ ಶುಕವಾಣಿ ಸಖಿ ಪ


ಭೋಗ ಭಾಗ್ಯ ಬಯಸುವ | ಕು

ಯೋಗ ಕುತ್ಸಿತಳಲಿ ಅ.ಪ.


ಅಗಣಿತ ಗುಣಾರ್ಣವಗೆ

ಸುಗುಣನೆಂದರಿತು ನಾ ಮಣಿಯಲರಿಯೆ

ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ

ನಗಧರನ ಸ್ತುತಿಸಲರಿಯದವಳಲ್ಲಿ 1


ರಮಾಭಿಮಾನ್ಯನಂತಾಸನ ಸದನಗೆ

ಕಮಲಾಸನವಿತ್ತು ಪ್ರೇಮ ಮಾಡಲರಿಯೆ

ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ

ನೇಮದಿಂದ ದೀಪದಾರತಿಯ ಮಾಡುವಳಲ್ಲಿ 2


ಸಿರಿಭವಾದ್ಯರೆ ಆಭರಣ ಉಳ್ಳವಗೆ

ಕರಗುವ ಕನಕ ತೊಡಿಸಲರಿಯೆ

ಕರಿವರದ ವಿಜಯ ರಾಮಚಂದ್ರವಿಠಲನ್ನ

ಅರಿತು ಒಲಿಸಲರಿಯದವಳಲ್ಲಿ 3

***


No comments:

Post a Comment