Thursday, 5 August 2021

ಶ್ರೀನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ನಾಮಗಿರಿ ಅಮ್ಮ  ಪ


ಶ್ರೀ ನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ಸಲಹೆನ್ನ

ಶ್ರೀ ನರಸಿಂಹನ ನಿಜಸತಿ ಶುಭಕರಿ

ವನರುಹಜಾಂಡದ ಜನನಿ ಭೂ ಅಂಭ್ರಣಿ ಅ.ಪ


ಬೊಮ್ಮನ ಪ್ರಳಯದಲಿ ಕಮಲಜ ಆಲದ ಎಲೆಯಾಗಿ

ಸ್ವಾಮಿ ಸ್ವಾಪ್ಯನ ಬಹುನಂದದಿ ಸ್ತುತಿಸಿ

ಸಮಸ್ತಜಗತ್ ಸತ್ಸøಷ್ಟಿಯ ಗೈಸಿದೆ 1

ಕ್ಷೀರಾಂಬುಧಿಯಿಂದ ತೋರಿ ನೀ ಸರ್ವಜನರ ಮುಂದೆ

ನಾರ ಅಜಿತ ಸರ್ವೋತ್ತಮ ಹರಿಗೆ ನೀ

ನಿರಂತರ ನಿಜಸತಿಯೆಂದು ಪ್ರಕಟಿಸಿದೆ 2

ಘನ ಬಾಲಭಕ್ತನಿಗೆ ಒಲಿದ ವೃತಿತಿಜಾಸನ ಪಿತನು

ಹನುಮವಂದಿತ ಶ್ರೀ ಪ್ರಸನ್ನ ಶ್ರೀನಿವಾಸ

ನರಸಿಂಹನ ಸಹ ಭಕ್ತಜನರ ಪೊರೆವೆ 3

***


No comments:

Post a Comment