Thursday, 5 August 2021

ಸಾಗಿ ಬಾರಯ್ಯ ಗುರುರಾಜಾ ನಾ ಬಾಗುವೆ ankita gurutandevaradagopala vittala vadiraja stutih

 by ಗುರುತಂದೆವರದಗೋಪಾಲ ವಿಠಲ

ಶ್ರೀ ವಾದಿರಾಜರು

ಸಾಗಿ ಬಾರಯ್ಯ ಗುರುರಾಜಾ ನಾ ಬಾಗುವೆ ನಿಮಗೆ ಶಿರವಾ ಗುರುರಾಜಾಭಾಗವತರ ದುರಿತೌಘಗಳ ಕಳೆಯೊ ಗುರುರಾಜಾ ದುರ್ಮಾಯವಾದಿಗಳ ಪಲ್ಮುರಿಯೊ ಗುರುರಾಜಾ ಸುರರೆಲ್ಲ ತವ ಮೇಲೆ ನಿತ್ಯಪೂಮಳೆಗರೆವರೊ ಗುರುರಾಜಾ ತುಂಬುರ ನಾರದರು ನಿತ್ಯಗಾನಗಳಿಂದ ಮೆರೆವೊರೊ ಗುರುರಾಜಾ ಬಲು ಧಿಮಿಕೆಂದು ಅಪ್ಸರರು ನಾಟ್ಯಗಳಿಂದ ಕುಣಿವರೊ ಗುರುರಾಜಾ ನೀನ್ಹೊದ್ದ ಕಾವಿ ಶಾಟಿ ನಿನಗೊಪ್ಪುತಿದೆ ಗುರುರಾಜಾಶ್ರೀ ಮುದ್ರೆ ಗಂಧಾಕ್ಷತಿ ಛಂದನೋಳ್ಪರಿಗೆ ಗುರುರಾಜಾಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದ ಗುರುರಾಜಾಝಗ ಝಗನೆ ಮುಖಕಮಲಗಳ್ಹೊಳೆವದೊ ಗುರುರಾಜಾ ಋಜುಗುಣದವರ ಹೌದೆಂದು ಪೇಳುವನರನ ಗುರುರಾಜಾ ನಿಂದೆ ಮಾಡಿದವರಿಗೆ ದೇಹದಲಿ ಕ್ರಿಮಿಕೀಟ-ಗಳುದುರುವುದು ಗುರುರಾಜಾ ನೀ ಬಂದ ಜನರಿಗೆ ಇಲ್ಲಿ ಹರುಷ ಪಡಿಸುವಿಯೊ ಗುರುರಾಜಾ ನಿನ್ನ ಮಹಿಮೆನಾನಿನ್ನೇನು ಪೇಳಲೊ ಗುರುರಾಜಾನೀ ಪೇಳು ನಿನ್ನ ಮಹಿಮೆಯ ಎನಗೆ ಗುರುರಾಜಾ ನೋಡಲಾಶ್ಚರ್ಯಯೆನಗಾಗಿದೆಯೊ ಗುರುರಾಜಾ ಶ್ರೀ ಭೂತರಾಜರಿಂದ ನೀ ಪೂಜೆಯಕೈಕೊಂಬೆ ಗುರುರಾಜಾ ಅವರು ಧಿಮಿಧಿಮಿಕೆಂದು ಕುಣಿದಾಡುವರೊ ಗುರುರಾಜಾ ಎಡಬಲದಿ ದ್ವಾರಪಾಲಕರಾನಂದದಿಂದಿರುವರೋ ಗುರುರಾಜಾ ಭಕ್ತಿಯಲಿ ಭಜಿಸುವರಿಗೆಲ್ಲ ನೀ ಮುಕ್ತಿಯನೆ ಕೊಡುವೆ ಗುರುರಾಜಾ ನಿನ್ನಂಥ ಕರುಣಿ ಗುರು ಇನ್ನಿಲ್ಲ ಧರೆಯೊಳಗೆ ಗುರುರಾಜಾ ನೀ ಮನ್ನಿಸಿ ಎನ್ನ ಸಲಹಯ್ಯ ಗುರುರಾಜಾ ಘನ್ನ ಸಂಸಾರದಲಿ ಬನ್ನ ಬಟ್ಟು ನಾ ಬಹಳ ನೊಂದೆನೊ ಗುರುರಾಜಾಕೈ ಪಿಡಿಯೆಂದು ಇಲ್ಲಿ ನಾ ಬಂದೆ ಗುರುರಾಜಾಉದ್ಧಾರ ಮಾಡಬೇಕೆಂದು ನಿಂದೆನೊ ಗುರುರಾಜಾ ಮಂದ ಭಾಗ್ಯ ಜೀವನ ಕುಂದೆಣಿಸಬ್ಯಾಡಿಂದು ಗುರುರಾಜಾ ಬಂಧು ನೀನೆಂದು ನಿನ್ನಡಿಗೆ ನಮೋ ನಮೋ ಎನುವೆ ಗುರುರಾಜಾಆನಂದ ಸಿಂಧು ನೀನೆಂದು ಅಡಿಗಡಿಗೆ ಬೇಡುವೆ ಎನ್ನಾನಂದಕೊಡು ಎಂದು ಗುರುರಾಜಾ ರುಕ್ಮಿಣಿ ಕಳುಹಿದ ವಾಲಿಯನು ಶ್ರೀಕೃಷ್ಣಗರ್ಪಿಸಿದೆ ಹಿಂದೆ ಗುರುರಾಜಾ ಸಾಮಾನ್ಯವಲ್ಲವೋ ನೀ ಪವಮಾನರಾಯನೋ ಗುರುರಾಜಾ ಸುರರಿಗಮೃತವುಣಿಸಿದಿಯೋ ನೀ ಗುರುರಾಜಾ ವೃಂದಾವನಾಚಾರ್ಯರಿಂದ ಸೇವೆಯನು ಸ್ವೀಕರಿಸಿ ಸುಖವ ಸುರಿಸಿದೆಯೋ ಗುರುರಾಜಾ ಶ್ರೀ ಸ್ವಾದಿಯ ಮಠದಿ ನೀನಿರುವಿ ಗುರುರಾಜಾ ಧವಳಗಂಗೆಯ ಸ್ನಾನ ಅಮೃತಪಾನವ ಮಾಡಿಸಿ ನೀದಮುಕ್ತಿಯನೆ ಕೊಡುವೆ ಗುರುರಾಜಾ ಜೀವೇಶಕೊಂದೆಂಬೋರ ಪಲ್ಗಳುದರಿಸುವೆ ಗುರುರಾಜಾ ಕಚ್ಛರಕ ಮಣಿಮಂತ ಖಳ ಸಂಕರನ ಶಾಸ್ತ್ರ ಹುಟ್ಟಡಗಿಸಿದೆಯೊ ಗುರುರಾಜಾ ಮಧ್ವಮತವನುದ್ಧಾರ ಮಾಡಿ ನೀ ಕಡಗೋಲಕೃಷ್ಣನ್ನುಡುಪಿಯಲಿ ಪೂಜಿಸಿದ್ಯೊ ಗುರುರಾಜಾ ಲಂಡಮಾಯಿಗಳ ಗುಂಡಿ ವಡೆಯಲುದ್ದಂಡ ಮಾರುತಿ ಪದಕೆ ಬರುವೆಯೋ ಗುರುರಾಜ ಪಂಚಬಾಣನ ಪಿತನ ಸ್ಮರಿಸುತ ಪಂಚ ವೃಂದಾವನದಿ ಮೆರೆವೆ ಗುರುರಾಜಾ ಮಿಂಚಿನಂದದಿ ಪೊಳೆಯುತಿಲ್ಲಿ ಪಂಚನಂದನನೆಂದು ತೋರುವಿ ಗುರುರಾಜಾ ಪಂಚಪಾತಕ ಕಳವಿ ಗುರುರಾಜಾಪಂಕಜಾರಿಯ ವಕ್ತ್ರ ಗುರುರಾಜಆತಂಕವಿಲ್ಲದೆ ಭಜಿಪ ಕುಜನರಶಂಕೆಹಿಡಿಸಿ ಸುಜನರ ಶಂಕೆ ಬಿಡಿಸುವೆ ಗುರುರಾಜಾಪಕ್ಕಿ ರಾಜಾ ರಾಜನಾಗ ಶಂಕರೇಶನೋ ನೀ ಗುರುರಾಜಾ ಭಜಿಸುವೋರಿಗೆ ಭಾಗ್ಯ ಕೊಡುವಿಯೋ ಗುರುರಾಜಾಅಮರೇಂದ್ರ ವಂದಿತ ಋಜುಗಣೇಶ ಭಾವಿಮರುತ ಗುರುರಾಜಾ ಶ್ರೀಶನ ಭಜನೆ ಮಾಡುತ ಭಾಗ್ಯ ಕೊಡುವೆ ಗುರುರಾಜಾ ವಾಜಿವದನಾರ್ಚಕ ಶ್ರೀ ಗುರುರಾಜಾ ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಗುರುರಾಜಾ ದೇವ ದೇವೇಶನ ಪರಮ ಒಲುಮೆಗೆ ಪಾತ್ರ ಗುರುರಾಜಾ ಪಾವನ್ನ ತಮ ಚರಿಯನೊ ಗುರುರಾಜಾ ಪತಿತ ಪಾಲನೊ ಶ್ರೀ ಗುರುರಾಜಾ ಸಾವಧಾನದಿ ಎನ್ನ ಆದಿರೋಗವ ಕಳೆಯೊ ಗುರುರಾಜಾ ಕೇವಲ ಸದ್ಭಕ್ತಿಶೀಲನ ಮಾಡಯ್ಯ ಗುರುರಾಜಾ ಶ್ರೀ ಭಾರತೀಪತಿ ಪದವನೈದುವ ಮಹಾತ್ಮ ಗುರುರಾಜಾ ಮುರಾರಿ ಸುರ ಪೂಜ್ಯ ಕರುಣಿಕಾಯೊ ಗುರುರಾಜಾ ಸಾರಿದೆನು ತ್ವಚ್ಛರಣ ಸರಸೀ ಯುಗ್ಮಗಳ ಗುರುರಾಜಾ ದೂರ ಮಾಡದೆ ಹರಿಯ ಕರುಣ ಪಾತ್ರನ ಮಾಡೊ ಗುರುರಾಜಾ ಪರಮ ಭಾಗವತ ಶಿರೋರತ್ನರಿಂದರ್ಚಿತನೆ ಗುರುರಾಜಾ ಸಿರಿ ವೇಣುಗೋಪಾಲವೇದ್ಯವೇದ್ಯನ ಮನದಲ್ಲಿ ಬಿಡದಿಪ್ಪ ಪರಮಕೃಪೆ ಬೇಡುವೆ ಗುರುರಾಜಾ ಕರುಣಾಬ್ಧಿ ಕೃಪೆ ಮಾಡೊ ಗುರುರಾಜಾ ವಾದಿರಾಜ ಗುರು ನೀ ದಯವಾಗದೆ ಗುರುರಾಜಾ ಈ ದುರಿತವ ಕಳೆದು ಆದರಿಪರ್ಯಾರೋ ಗುರುರಾಜಾ ಯಮಿವರ್ಯನೆ ತ್ರಿವಿಕ್ರಮನ ರಥೋತ್ಸವ ಸಮಯವಿದೆಂದು ಗುರುರಾಜಾ ಮತ್ಕ್ರಮಣವ ನಿಲಿಸಿದೆ ಏಕಾಂತ ಭಕ್ತ ಹರಿಗೆ ಗುರುರಾಜಾಬಂದು ಕರೆಯೆ ಪುರಂದರನಾಳ್ಗಳು ಗುರುರಾಜಾ ಹಿಂದಟ್ಟಿದೆ ಅವರಕರ್ಮಂದಿಗಳರಸೇ ಗುರುರಾಜಾ ಅರ್ಥಿಗಳಿಗೆ ಪರಮಾರ್ಥ ಕೊಡುವ ಗುರುರಾಜಾ ತೀರ್ಥ ಪ್ರಬಂಧವ ಕೀರ್ತನೆಗೈದೇ ಗುರುರಾಜಾ ಭಾಗೀರಥಿಯಂತ್ಯೋಗಿವರ ಶ್ರೀ ವಾಗೀಶರ ಕರಯುಗ ಸಂಭವನೆ ಗುರುರಾಜಾ ನರ ಮಿಶ್ರಿತ ನರಹರಿ ನೈವೇದ್ಯವ ಅರಿತು ಪೇಳಿ ಉಂಡರಗಿಸಿಕೊಂಡಿ ಗುರುರಾಜಾ ಯಲರುಣಿಯ ಭಯಕೇ ಅಂಜಲಿ ನಿರ್ಮಾಸನ ಕೆಳಗಿರೆ ಕಂಡು ಗುರುರಾಜಾ ಅದನುಳುಹಿದೆ ಕರುಣಿ ಗುರುರಾಜಾ ಹಯವದನ ಪದದ್ವಯ ಭಜಕಾಗ್ರಣಿ ಗುರುರಾಜಾ ನಯದಿ ವಿಪ್ರಗೆ ನಯನವನಿತ್ತೇ ಗುರುರಾಜಾ ಪೂತೋತ್ತಮ ಶ್ರೀ ಶೌರಿಯ ಖ್ಯಾತಿಯ ತುತಿಪನಾಥಜನಾಪ್ತ ಗುರುನಾಥಖ್ಯಾತಿಯ ತೋರಿಸು ಯೆನ್ನಲಿ ನೀ ಯನ್ನ ಗುರುರಾಜಾ ದಾಸ ಸಮೂಹವ ನೀ ಸಲಹೋ ಸದಾ ಗುರುರಾಜಾ ನೀ ಗತಿಯೆಂದನುರಾಗದಿ ನಂಬಿದ ಗುರುರಾಜಾ ಇಳೆಯೊಳು ಕಲಿಬಾಧೆಯು ವೆಗ್ಗಳವಾಗಿದೆಯೊ ಗುರುರಾಜಾ ಜನ್ಮ ಆದಿವ್ಯಾಧಿ ಉನ್ಮಾದ ವಿಭ್ರಮನಿರಹೊಕ್ಕರೆಯನ್ನುಂಟೆ ಗುರುರಾಜಾ ನಿನ್ನೊಶನಾದ ಜಗನ್ನಾಥರಾಯನ ಇನ್ನಾದರೂ ತೋರೆನ್ನಮನದಲ್ಲಿ ಗುರುರಾಜಾ ಹರಿಯ ಯೋಚನೆಯೊಳಗುಳ್ಳ ಭಕುತಿಯ ಕೊಡೆನಗೆ ಗುರುರಾಜಾ ಅನಂತನ ಮುಖ್ಯ ಪ್ರತಿಬಿಂಬನೋ ಗುರುರಾಜಾ ಕ್ಷಣದೊಳಗೆ ಸಿದ್ಧರನು ಮಾಳ್ಪನಂತಮಹಿಮ ನೀ ಗುರುರಾಜಾಅನಂತಗಣಿತ ಕರುಣರಸ ಸುರಿಸೆನಗೆ ಗುರುರಾಜಾ ಕರುಣದ ಆಕಾರನೋ ನೀನು ಗುರುರಾಜಾ ಯಲ್ಲಿ ನೀನಿರುವಿಯೋ ಅಲ್ಲಲ್ಲೆ ಹರಿಯಿರು-ವನೋ ಗುರುರಾಜಾ ಅಲ್ಲಲ್ಲೆ ನೀ ಹರಿವೆ ಮುಖ್ಯ ಪ್ರತಿಬಿಂಬನೋ ಗುರುರಾಜಾ ಹರಿಯ ವಿಹಾರಕ್ಕೆ ಆಲಾಪನೊ ನೀನು ಗುರುರಾಜಾ ಹರಿಯು ಕೋಲಾಹಲದಿ ನಿನ್ನಲ್ಲಿ ಆನಂದಕ್ರೀಡೆ ಮಾಡುವನೊ ಅನುಗಾಲ ಗುರುರಾಜಾ ಶ್ರೀಹರಿಯ ಸುಪ್ರೀತ ಘನ ದೂತನೊ ನೀನು ಗುರುರಾಜಾ ಶ್ರೀಹರಿಯ ನೀ ಸಹಿತ ಯೆನ್ನಲ್ಲಿ ತೋರೆನಗೆ ಸತತ ಗುರುರಾಜಾಭಾವಿ ಭಾರತಿಯ ಮನಕೊಪ್ಪುವೋ ಅತಿ ಚೆಲ್ವ ಸುಂದರ ಗುರುರಾಜಾ ಶ್ರೀಹರಿಗೆ ಅವಸರದ ಆಳೋ ನೀ ಗುರುರಾಜಾ ಶ್ರೀಹರಿಗೆ ಮುಖ್ಯ ಮಂತ್ರಿಯು ನೀ ಗುರುರಾಜಾ ಚತುರ್ದಶ ಭುವನದಲ್ಲಿ ನಿನ್ನ ಪಾದ ವ್ಯಾಪಿಸಿದೆ ಗುರುರಾಜಾ ಚತುರ್ದಶ ಭುವನದಲಿ ಅಡಗಿದೆಯೊ ನಿನ್ಹಸ್ತ ಗುರುರಾಜಾ ಶ್ವಾಸ ನಿಯಾಮಕ ಪ್ರಭುವಾಸವೇ ನಿನ್ನಿಂದ ಗುರುರಾಜಾ ಉಸುರಲೇನಯ್ಯ ನಿನ್ನಲ್ಲಿ ನಾನು ಗುರುರಾಜಾ ಹಯ ಮುಖ ಪಾದದ್ವಯ ಸೇವಕವರ ಜಯಶೀಲನೋ ನೀನು ಗುರುರಾಜಾ ನಿಜ ಭಕ್ತರ ನಿಜ ಭಯಹಾರಕ ನೀ ಗುರುರಾಜಾ ದೂಷಕರಿಗೆ ಬಹು ಘಾಸಿಕೊಟ್ಟು ನಿಜದಾಸರ ಶೋಷಿಪೆ ಗುರುರಾಜಾ ಮೋದತೀರ್ಥಮತ ಸಾಧಿಸಿ ಮೆರೆಸುವ ಗುರುರಾಜಾ ವಾಣೀಶರು ಗುರುಬೋಧರ ಸಮ ನೀ ಗುರುರಾಜಾಇಂದಿರಾಪತಿಯ ಛಂದದಿ ಪೂಜಿಪೆ ಗುರುರಾಜಾನಿಷ್ಕಲುಷ ಚಿತ್ತ ಯತಿಕುಲ ಭೂಷಣಕೇ ಗುರುರಾಜಾ ಕಲಿ ಮುಖ ದಾನವ ಕುಲಕಂಟಕನೋ ಗುರುರಾಜಾ ಯೆನ ತುಂಟತನ ಬಿಡಿಸಿ ನಿನ ಬಂಟನ ಮಾಡಿಕೊ ಗುರುರಾಜಾ ಕಂಸಾದಿ ಮುಖ ಧ್ವಂಸಿ ಸಮೀರಣ ಗುರುರಾಜಾ ನೀ ಹಂಸವಾಹ ಪಂಚಾಂಶಸಹಿತನೊ ಗುರುರಾಜಾ ಲಾತವ್ಯಾತ್ಮಕ ಭೀತಿರಹಿತನೇ ಗುರುರಾಜಾ ಮಹಪಾತಕ ಹರನೇ ಸುರನಾಥ ಮಹಿತನೇ ಗುರುರಾಜಾ ಸುಂದರ ಪಂಚಸು ವೃಂದಾವನದೊಳು ಗುರುರಾಜಾ ವೃಂದಾರಕ ಮುನಿ ವೃಂದವಂದನೇನೋ ಗುರುರಾಜಾ ಭಾವಿ ಭಾರತಿಯ ಕರ ಕಮಲ ಸೇವಿತ ಪದ ರಾಜೀವದ್ವಯನೊ ಗುರುರಾಜಾ ವೃಂದಾವನ ಸದ ಮಂದಾಖ್ಯಾನವ ಭೂ ವೃಂದಾರಕರಿಗೆ ತಿಳಿಸಿದೆ ಗುರುರಾಜಾ ಸಾನುರಾಗದಿ ಪ್ರಾಣಪತಿ ಶೌರಿಯ ಧ್ಯಾನದಿಂದ ನೀ ಸನ್ಮಾನಿತನೊ ಗುರುರಾಜಾ ನಿನ್ನಯ ಆಳರಸುತನಕೆ ನಮೋ ನಮೋ ಗುರುರಾಜಾ ಹೇ ಭಾವಿ ಭಾರತೀಶ ಗುರುರಾಜಾ ಯೆನ್ನಯ ಭವ ಭೀತಿ ಭೇದಿಸೊ ಗುರುರಾಜಾ ಭಾವಕನೆ ನಿನ್ನ ಭಯ ತೋರೊ ಗುರುರಾಜಾ ನಾ ನಿನ್ನ ನಿನ್ನವರದಾಸನೊ ಗುರುರಾಜಾ ನೀ ಭಾರತವ ಭೇದಿಸಿ ಗುರುರಾಜಾ ಭುವನದಳ ಚತುರ್ದಶಕೆ ಭವಸುಧಾಂಬುಧಿಯ ಕಲ್ಪಿಸಿದೆ ಗುರುರಾಜಾ ಜಾಣೆ ಶ್ರೀ ಭಾರತಿ ದೇವಿಯು ಕೈಕೊಂಡು ತೋರುವಿಯೊ ಗುರುರಾಜಾ ಭಾವಿ ಪಾರ್ವತೀಶ ಶ್ರೀ ಭೂತರಾಜರಿಂದೊಂದಿತ ಗುರುವರ ಶ್ರೀ ಗುರುರಾಜಾ ವಂದಿಪೆ ನಾನಿನಗೆ ಶ್ರೀ ಗುರುರಾಜಾ ಕಾಲನಾಮಕ ನೀನಹುದೊ ಶ್ರೀ ಗುರುರಾಜಾ ಕಲಿ ಕುಲ ಮಾರಶೂರನೊ ನೀನು ಗುರುರಾಜಾ ಬಾಲ ಬಲು ಚತುರೇಶನೂ ನೀನು ಗುರುರಾಜಾ ಬಲು ಶೂರನೂ ನೀನಹುದೊ ಗುರುರಾಜಾ ಕಾಲ ಬರಲು ಕೇವಲವು ನೀ ಗುರುರಾಜಾ ಪ್ರಹ್ಲಾದ ರಾಜ ಶ್ರೀವ್ಯಾಸರಲಿ ನೀ ಸೇವಿಸುತಲಿರೇ ಗುರುರಾಜಾಸುರ ಹರ ನಾರಾಯನನು ನಿನ್ನಯ ದ್ರೋಹಿಸೇ ಗುರುರಾಜ ಕುಲಯಾದವಾಧಿಪ ಕೃಷ್ಣ ಪರಿಸರ ನೀನಾಗ ಶಪಿಸಲು ಗುರುರಾಜಅವನು ವೇಗದಿ ತಾಳಿದ ತನುಭೂತ ಗುರುರಾಜಭೂತಗಣದೊಳು ಮಹರಾಜನೆನಿಸಿ ಅವ ಭೂಸುರರ ನೀಗುತಲಿರಲು ಗುರುರಾಜಕೆಲವು ಕಾಲದಿ ಅವನ ನೀ ಸ್ಥಳಕೆ ನೀ ಪೋಗ್ಯವನ ಸೋಲಿಸೆ ಗುರುರಾಜನಿನ್ನ ದಾಸನಾಗ್ಯವನು ನಿನ್ನ ಸೇವಿಸೇ ಗುರುರಾಜ ಸೇವಿಸಿದವಗೆ ನಿಜ ಪದವನಿತ್ಯೋ ನೀ ಗುರುರಾಜ ಫಾಲನಯನನ ಪಾಲನೇ ಗುರುರಾಜ ಶ್ರೀ ತಂದೆವರದರಾಜರ ಹೃತ್ಪದ್ಮ ಪೀಠಕೋಣತ್ರಯ ವಿರಾಜಿತನೋ ಗುರುರಾಜ ನೀಲಿಂಗುಂತರ್ಬಹಿವ್ರ್ಯಾಪ್ತನೊ ಗುರುರಾಜ ಬಹುಪರಿಯಲಿ ಜೀವರ ಹೃದಯಾಕಾಶದಿ ಶೋಭಿಪೆ ಗುರುರಾಜ ಮೂಲ ಮುಕುಟಾಭರಣ ಕೆತ್ತಿದ ರತ್ನ ನವಮಣಿ ವಜ್ರ ಧರಿಸಿ ಗುರುರಾಜ ದನುಜರ ಕೊಂದು ಬಿಸುಟುವಿಯೊ ಗುರುರಾಜ ನೀ ರುದ್ರೇಂದ್ರ ವಂದ್ಯನೊ ಗುರುರಾಜ ನೀ ಸುಂದರಾಂಗನೋ ಗುರುರಾಜ ಸುವಂದ್ಯ ಮಹಿಮನೋ ಗುರುರಾಜ ಶ್ರೀ ವೃಂದಾವನಾರ್ಯ ಗುರುವರನೋ ಗುರುರಾಜ ವೇದ ವಂದ್ಯ ಸುಮಹಿಮನೊ ನೀನು ಗುರುರಾಜ ವೇದಾದಿ ಆಶ್ರಿತಹೋಮನೋ ಗುರುರಾಜ ವೇದಾಭಿಮಾನಿಗಳ ಕಾಮನೋ ಗುರುರಾಜ ವೇದನಿಧಿ ಗುರು ಭೀಮನೋ ಗುರುರಾಜ ವೇದ ವೇದ್ಯ ಸುವಂದ್ಯನೋ ಗುರುರಾಜ ನೀ ವಿಧಿ ಸಖನೋ ಗುರುರಾಜ ವಾದಿಗಳ ಕುಲವದ್ದು ದಶರಥ ಹೇಯನೆನಿಸಿದ ಬೌದ್ಧದೇವನ ಗುರುರಾಜ ಶ್ರದ್ಧೆಯಿಂದಲಿ ಸಿದ್ಧಪಡಿಸುವದೆಂದು ಗುರುರಾಜ ಜನರ ಬುದ್ಧಿ ಭೇದವ ಮಾಡಿ ದಿವದಿ ಕದ್ದು ದೇವನಭಾವದಿಂದಲಿ ಪೂಜಿಸಲು ನೀ ಗುರುರಾಜಅದು ಬಲು ಸುದ್ದಿಯ ತಿಳಿಯಲು ಸದ್ದು ಇಲ್ಲದೆ ಬೌದ್ಧ ಜನರು ಬಂದು ನೋಡೆ ಗುರುರಾಜ ತಿದ್ದಿ ವಿಗ್ರಹ ತೋರಿ ಸರ್ವ ಸುರರನು ಸಲಹಿ ಅಸುರರ ವದ್ದ ಪಲ್ಗಳ ಮುರಿದು ಮೆರೆದೇ ಗುರುರಾಜ ನೀ ಪದ್ಮಜಾತನ ಪದವಿ ಪೊಂದುವಿ ಎಂದು ನಿನ್ನಯಪದ್ಮಪಾದಕೆ ಬಿದ್ದೆನಾ ಗುರುರಾಜ ನೀ ಗುರು ಮಧ್ವವಲ್ಲಭನಿಂದ ರಮಣವ ಕೊಂಡು ಭಜಿಸುವೆ ಗುರುರಾಜ ಸಿದ್ಧ ಶೇಖರ ಸೋಮ ವಂದ್ಯನೊ ನೀ ಗುರುರಾಜ ಹರುಷದಿಂದಲಿ ನಿನ್ನ ದರುಶನವಾದ ದಿನದಾರಭ್ಯ ಗುರುರಾಜ ಮನದಲಿ ಮಿಂಚಿನಂತೆ ಪೊಳೆವೊ ಸುಂದರ ಸುಂದರಾಂಗಿಯ ಸಹಿತ ವಂದಿಪೆನೊ ಗುರುರಾಜ

****


No comments:

Post a Comment