ರಾಗ : ಆನಂದಭೈರವಿ ತಾಳ : ರೂಪಕ
ಕದರುಂಡಲಗಿ -
ಹನುಮಂತದೇವರು ।
ಇಂಥಾ ಕೀರ್ತಿಯ ಮೂರ್ತಿ-
ನ್ನಾರೇ ನೋಡಮ್ಮಯ್ಯ ।। ಪಲ್ಲವಿ ।।
ಸಂತತ ಸೀತಾಪತಿಯ ಧ್ಯಾನರೊಳು
ಕಂತುವಿನಸ್ತ್ರವ
ಖಂಡಿಸಿದೊಡೆಯಾ ।। ಅ ಪ ।।
ಕಾಶಿ ರಾಮೇಶ್ವರ ಮಧ್ಯದ ದೇಶದಿ
ಸೂರಿ ಸುಲಿಗೆ ನೋಡಮ್ಮಯ್ಯ ।
ಸಾಸಿರ ಶತ ತುರಗಾವಿ ಪಲ್ಲಕ್ಕಿ-
ಯ ಸರದಾರರ ನೋಡಮ್ಮಯ್ಯ ।
ಭೂಸುರರಾಯರು
ಸೀಮೆಯ ಸುತ್ತಲು ।
ಗಾಸಿಯ ಮಾಡದೆ
ಗ್ರಾಮವ ಕಾಯ್ದ ।। ಚರಣ ।।
ತಾರಣ ನಾಮ ಸಂವತ್ಸರ ಶುದ್ಧ -
ವೈಶಾಖದಿ ನೋಡಮ್ಮಯ್ಯ ।
ಧರೆಯೊಳು ಕಲಹ ವಿಪರೀತವ-
ದರೊಳು ರಣಮಂಡಲ
ನೋಡಮ್ಮಯ್ಯ ।
ಊರೆಲ್ಲ ಮೊರೆಯಿಡೆ
ಈಕ್ಷಿಸಿ ಮಹಿಮೆಯ ।
ತೋರುವ ಅಭಯ
ಪ್ರಸಾದವ ಕೊಡುವಾ ।। ಚರಣ ।।
ಸಕಲ ಜನರು ಎಲ್ಲಾ -
ಸ್ವಾಮಿಯಿಂದುಳಿದೆವು
ಜಯ ನಮೋ
ಎನೆ ನೋಡಮ್ಮಯ್ಯ ।
ಅಕಲಂಕ ಶೇಷಾನೃಪ -
ಶ್ರೀ ರಾಮರ ಸೇವಕಮಣಿ
ನೋಡಮ್ಮಯ್ಯ ।
ಲೋಕದಧಿಕ ಗುರು
ಕದರುಂಡಲೀಶಾ ।
ಬೇಕೆಂದು ನಿಂತಾ
ಶ್ರೀ ಹನುಮಂತ ।। ಚರಣ ।।
***
ಕದರುಂಡಲಗಿ ಹನುಮಂತದೇವರು
ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ
ಸಂತತ ಸೀತಾಪತಿಯ ಧ್ಯಾನರೊಳು
ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ.
ಕಾಶಿ ರಾಮೇಶ್ವರ ಮಧ್ಯದ ದೇಶದಿ ಸೂರಿ ಸುಲಿಗೆ ನೋಡಮ್ಮಯ್ಯ
ಸಾಸಿರ ಶತ ತುರಗಾವಿ ಪಲ್ಲಕ್ಕಿಯ ಸರದಾರರ
ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು
ಗಾಸಿಯ ಮಾಡದೆ ಗ್ರಾಮವ ಕಾಯ್ದ 1
ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ
ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ
ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ
ತೋರುವ ಅಭಯ ಪ್ರಸಾದವ ಕೊಡುವಾ 2
ಸಕಲ ಜನರು ಎಲ್ಲಾ ಸ್ವಾಮಿಯಿಂದುಳಿದೆವು
ಜಯ ನಮೋ ಎನೆ ನೋಡಮ್ಮಯ್ಯ
ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ
ಲೋಕದಧಿಕ ಗುರು ಕದರುಂಡಲೀಶಾ
ಬೇಕೆಂದು ನಿಂತಾ ಶ್ರೀ ಹನುಮಂತ 3
***
No comments:
Post a Comment