vijayeendra teertha rayara mutt yati stutih by kurudi raghavendracharya
ಶ್ರೀ ವಿಜಯೀಂದ್ರರ ।
ಅಂಬುಜಾದ್ವಯ
ಪಾದವಾ ।। ಪಲ್ಲವಿ ।।
ತುಂಬಿ ಮತಿಮತ ಶಾಸ್ತ್ರ ।
ಹಂಬಲ ಸತತ ಯಿತ್ತು ।
ಕಂಬಕಂಧರನ ತೋರಿ ।
ಕುಂಭಕೋಣದಿ ಮೆರೆವ ।। ಅ ಪ ।।
ಸಿರಿ ವಿಠಲಾರ್ಯನೆನ್ಸಿ ।
ಗುರುಗಳ ಸೇವಿಸಿ ।
ಮರುತ ಶಾಸ್ತ್ರವ ಗ್ರಹಿಸಿ ।
ಗುರು ವ್ಯಾಸರಾಜ ಯತಿಗಳ ।।
ಕರುಣೆಯ ಪೊಂದುತ -
ಆಶ್ರಮವ ವಹಿಸುತ ।
ಗುರು ವಿಷ್ಣುತೀರ್ಥರೆಂದು ।
ಧರೆಯೊಳು ಮೆರೆದವರ ।। ಚರಣ ।।
ಸುರೇಂದ್ರ ತೀರ್ಥರಿಗೆ
ಇವರನು ಒಪ್ಪಿಸಿ ।
ಕರ ದಂಡ ಪಲ್ಲಟ ಗೈದು -
ವಿಜಯೀ೦ದ್ರ ನಾಮ ವಿಡಲಾ ।
ಭರದೀ ಘಟ ಕೋಣದಿ ।
ದುರುಳಾ ಎಮ್ಮೆ ಬಸವನಾ ।
ಗರುವವ ಮುರಿಯುತ ।
ಧರೆಯೊಳು ಮೆರೆದವರ ।। ಚರಣ ।।
ದುರ್ವಾದಿ ಅಪ್ಪಯ್ಯ ದೀಕ್ಷಿತನ -
ಬಾರಿಬಾರಿಗೆ ಸೋಲಿಸಿ ।
ನೂರಾನಾಲ್ಕು
ಗ್ರಂಥ ರಚಿಸಿ ।
ನಾರೆ ಬಾಳೆಲೆ ನಡೆದನು ।
ಧೀರ ಸುಧೀಂದ್ರರಿಗೆ -
ಆಶ್ರಮ ನೀಡುತ ।
ಶ್ರೀ ರಾಮ ಲಕುಮೀಶ -
ಮೂರುತಿ ಇತ್ತವರ ।। ಚರಣ ।।
****
No comments:
Post a Comment