Wednesday, 1 September 2021

ಕಾಯೋ ಕಾಯೋ ಕಾಯೋ ಕಾಯೋ ಕಂಸಾರಿ ನಿನ್ನ ಪದ ತೋಯಜಕೆರಗುವೆ ankita shyamasundara

..

ಕಾಯೊ ಕಾಯೊ | ಕಾಯೊ ಕಾಯೋ ಕಂಸಾರಿ ನಿನ್ನ ಪದ

ತೋಯಜಕೆರಗುವೆ | ಕಾಯಜ ಜನಕ ಪ


ಪಾಥÀಜ ಭವವಿಧಾತ ಸುಮನಸ

ಪ್ರಾತವಿನುತ ಮಾನಾಥನೆ ನಿರುತ 1


ಭದ್ರಮೂರುತಿ ಬಲಭದ್ರಾನುಜ ಮಂದ

ರಾದ್ರಿಪಾಣಿ ಸಮುದ್ರ ಶಯನ2


ಖೇಟವರೂಧ ಕಿರೀಟಸೂತ ಶತ |

ಕೋಟಿದಿನಪ ನಿಭ ಘೋಟಕವದನ 3


ಕಂತು ಜನಕ ಮಾವಾಂತಕ ಮಾನವ

ದಂತಿವೈರಿ ಜಗದಂತರಿಯಾಮಿ 4


ಸಾಮಗಾನಪ್ರೀಯ ಶಾಮಸುಂದರ

ವ್ಯೊಮ ನೃಪನ ಜಾಮಾತನೆ ಜವದಿ 5

***

 

No comments:

Post a Comment