Wednesday, 1 September 2021

ನೆನಿ ಮನವೇ ನೀ ಮುಕುಂದನ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ನೆನಿ ಮನವೇ ನೀ ಮುಕುಂದನ ಪ 


ನೆನಿ ಮನವೇ ನೀ ಮುಕುಂದನಾ| ಅಜ ವಂದ್ಯನಾ 1 

ಸಿರಿಲಕ್ಷುಮಿ ಮನೋಹರನಾ| ಸುರಾಧಾರನಾ ಯದುವೀರನಾ2 

ದುರಿತ ನಿವಾರಿಯಾ| ವರ ಶೌರಿಯಾ ಮುರವೈರಿಯಾ 3 

ಮನೋಹರ ಮೂರುತಿ ರಾಮನಾ| ಘನ ಶ್ಯಾಮನಾನಂತ ನಾಮನಾ 4 

ಗುರು ಮಹಿಪತಿ ಸುತ ಪ್ರೀಯನಾ| ಸ್ಮರ ನೈಯನಾ ಕೃಷ್ಣರೇಯನಾ 5

***

 

No comments:

Post a Comment