Sunday, 1 August 2021

ಬಾರೋ ಹೋಗುವ ನಡಿ ಮನೆಗೆ ಇಂದಿರೇಶ ankita mohana vittala

 ..

ಬಾರೋ ಹೋಗುವ ನಡಿ ಮನೆಗೆ ಇಂದಿರೇಶ ಪ


ಬಾರೋ ಎನ್ನ ಮನಸೆಂಬ ಮನೆಗೇ ಅ.ಪ.


ಕಣ್ಣಾ ಬಿಡಲು ಬ್ಯಾಡ ಜಲ-ವನ್ನು ಹೊಗಲಿ ಬೇಡ |ಮಣ್ಣಿಗಾಗಿ ದೈತ್ಯನ ನೀಗಿಚಿನ್ನಗೊಲಿದು ಹೋಗುವರೇನೋ 1

ತಿರಿಕಿ ಬೇಡಿದವನೇ ತಾಯಿ-ಶಿರವಾ ತರಿದವನೇ |ಕರಡಿ ಕಪಿ ಅಳಲುತರುಣರೊಡನೆ ಹೋಗದಲಿರೋ 2

ಬತ್ತಲೇ ನಿಂತಿದ್ದವನೆ ಹಯ-ಹತ್ತಿ ಓಡಿಸಿದವನೇ |ಚಿತ್ತದೊಡೆಯ ಮೋಹನ್ನ ವಿಠಲಎತ್ತಿ ಕರವ ಮುಗಿವೆ ಲೇಸೆಂದೂ 3

***


No comments:

Post a Comment