Wednesday 1 September 2021

ಹುಚ್ಚುಗೊಳಿಸುವರೆ ಮರುಳೆ ತರುಳಾರ ಅಚ್ಚುತ ಪರಮ ಗಂಭೀರ ಪುರುಷನೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಹುಚ್ಚುಗೊಳಿಸುವರೆ ಮರುಳೆ ತರುಳಾರ

ಅಚ್ಚುತ ಪರಮ ಗಂಭೀರ ಪುರುಷನೆ ಪ


ಎಲ್ಲವು ಬಯಸುವ ಹಟದಿ ಶಿಸುವಿಗೆ

ಬೆಲ್ಲವ ತೋರಿಸಿ ನಿಲುದಿಪ್ಪೋದು1


ಮಿನುಗುವ ಮಣಿತೋರೆ ತನು ಬೆವರೆ ಪೋಗೆ

ಕನಡಿಭಾನಿಂದುದಕ ಕೆಳಗೊಳಿಸುವರೆ 2


ಕಪ್ಪು ವಸ್ತ್ರವ ಕಂಡು ನಡುಗುವಂಗೆ

ಕಪ್ಪ ಕಲ್ಪಿಸೆ ಅಪ್ಪಾ ಎನ್ನೆ ಅಪ್ಪಿ ನಗಿಸುವರೆ 3


ನಗುವ ಕೂಸಿನ ಅಳಿಸಿ ಮುದ್ದಾಡಿ

ನಗುಸುವೀ ನೀನು ಬಗೆ ಬಗೆಯಿಂದ 4


ಜೀವರ ಈ ಪರಿ ಮಾಡದಿದ್ದರೆ ವಾಸು

ದೇವವಿಠಲ ನೀ ಕಾಲ ಕಳೆವದೆಂತೊ 5

***


No comments:

Post a Comment