Thursday, 11 March 2021

ನಮಿಸು ಮನವೆ ನೃಹರಿ ರೂಪವಾ ankita gurugovinda vittala

 ರಾಗ – : ತಾಳ -


ನಮಿಸು ಮನವೆ ನೃಹರಿ ರೂಪವಾ l

ರೋಗ ಹರಣನಾ ll ಪ ll


ಅಮಿತ ಮಹಿಮ ದಾನವ ಹರಣ l

ಸುರಪ ಪಾಲಕನಾ ll ಅ ಪ ll


ಸಕಲ ಸುರರ ದನುಜ ಬಾಧಿಸೆ l ಹರಿಗೆ ಮೊರೆಯಿಡೇ

ಆಕಳಂಕ ಮಹಿಮ ಅಭಯವಿತ್ತು l ಅವರ ಕಳುಹಿದಾ ll 1 ll


ಹಿರಣ್ಯಕಶಿಪುನುದರದಲ್ಲಿ l ಭಕುತ ಜನಿಸಲೂ

ಶರಣ್ಯ ಶ್ರೀಹರಿಯ ತುತಿಸಿ l ಸುರರು ಪಾಡಿದರೂ ll 2 ll


ಪಿತನು ತನ್ನ ಸುತನ ಬಾಧಿಸೆ l ಹರಿಯ ಚರಣವಾ

ಸತತ ನಮಿಸಿ ಭಜಿಸಿ ಭರದಿ l ಕಂಬದಿ ಕರೆದನೂ ll 3 ll


ಭೃತ್ಯನ್ವೊಚನ ಸತ್ಯ ಮಾಡೆ l ಸ್ತಂಭವ ಸೀಳುತಾ

ವ್ಯತ್ಯಸ್ತವಾಗೆ ಸಕಲರ ಹೃದಯ l ಘಡ ಘಡೀಸುತಾ ll 4 ll


ದೈತ್ಯನುದರ ಬಗೆದು ಕರುಳ l ಮಾಲೆ ಧರಿಸುತಾ

ನೃತ್ಯವಾಡಿ ತನ್ನ ಪ್ರಳಯ ರೂಪವಾ ತೋರಿದಾ ll 5 ll


ಅಕ್ಷರಜ್ಞೆ ಲಕುಮಿ ದೇವಿ l ಪಕ್ಷಿವಾಹನನಾ

ಲಕ್ಷಣ ವೀಕ್ಷಿಸಿ ಕುಕ್ಷಿಯ ಬಿಡುತ l ವತ್ಸನ ನೂಕಿದಳು ll 6 ll


ಮುದದಿ ಅವನ ತೊಡೆಯೊಳಿಟ್ಟು l ಮೋದ ಪಡಿಸುತಾ

ಸದಯದಿಂದ ಗೈದ ಅವನ l ಭಕ್ತ ಶ್ರೇಷ್ಠನಾ ll 7 ll


ಭಕುತಾ ಜನರ ಭೀಷ್ಟವೀವ l ಅಕುಟಿಲಾತ್ಮನೂ

ಪ್ರಕಟ ಕರಿಗಿರೀಯ ಹರಿಯು l ರುಕುಮಿಣೀ ಪತಿ ll 8 ll


ಪುರುಹುತನೂ ಪ್ರಹ್ಲಾದವರದ l ತೋರೊ ತವ ರೂಪಾ l

ಗುರುಗೋವಿಂದವಿಟ್ಠಲ ಭಜಿಪೆ l ಹರಿಸೊ ಭವ ಕೂಪಾ ll 9 ll

***


No comments:

Post a Comment