ದೃಷ್ಟಿಗೆ ಬಹು ಸಿರಿಯ
ಬೆಟ್ಟವನೆ ಮನಸಿಟ್ಟೇರಲು ಬೇಡಿದ
ಇಷ್ಟಾರ್ಥಗಳ ಈಡಾಡುವ ದೊರೆಯ ಪ
ಚಿತ್ರ ವಿಚಿತ್ರದ ಮಹಾದ್ವಾರ
ಚಿನ್ನದ ಗೋಪುರ
ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ
ಸುತ್ತಲು ಪ್ರಾಕಾರ
ಹೆಚ್ಚಿನ ತೀವ್ರತವೆ ಮನೋಹರ
ಮಾರುವ ವಿಸ್ತಾರ
ಚಿತ್ತಜನಯ್ಯನ ಶೈಲವೆ ದೂರದಿಂ-
ದ್ಹತ್ತಿ ಬರುವುದೀತನ ಪರಿವಾರ 1
ಕಟ್ಟಿದ ಉಡಿದಾರ
ಉಟ್ಟಿದ್ದ ನಿರಿಜರಪೀತಾಂಬರ
ಕೌಂಸ್ತುಭ ಮಣಿಹಾರ
ಗಟ್ಟಿ ಕರಕಂಕಣ ಕುಂಡಲಧರ
ಚತುರ್ಭುಜದಲಂಕಾರ
ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ-
ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2
ಆಕಾಶರಾಜನ ಕಿರೀಟ
ಚಿತ್ರವು ಬಹುಮಾಟ
ಹಾಕಿದ್ದ ಹರಿ ಕಡೆಗಣ್ಣಿನ ನೋಟ
ಭಕ್ತರ ಕುಣಿದಾಟ
ಭವ ಪಡಿಪಾಟ
ಬಿಡಿಸುವ ಯಮಕಾಟ
ಕೋಟಿ ಜನರ ಓಡ್ಯಾಟವೆ ನಮ್ಮ ಕಿ-
ರೀಟಿಯ ಸಖ ಕೇಶವನ ಮಂದಿರದೊಳ್ 3
ತಪ್ಪುಗಾಣಿಕೆಯ ಬೇಡುವ ಸರ್ಪ
ಶೈಲದ ತಿಮ್ಮಪ್ಪ
ಕಪ್ಪವ ಕಾಸು ಕವಡೆ ಮುಡುಪು
ಹಾಕದೆ ತಾನೊಪ್ಪ
ಜಪ್ಪಿಸಿ ನೋಡುವ ಜನರ ತಪ್ಪ
ಹುಡಿಕ್ಯಾಡುತಲಿಪ್ಪ
ಅಪ್ಪ ಮಹಿಮಾನಂತ ಮೂರುತಿ ತಾ-
ನೊಪ್ಪಿದರೊಲಿದು ಕೊಡುವ ಸಾರೂಪ್ಯ 4
ದೇಶದೇಶದೊಳು ಈತನ ವಾರುತೆಯು
ತುಂಬಿದ ಕೀರುತಿಯು
ಆಸೆಯ ದೈವ ಈ ಮೂರುತಿಯು
ಫಲ್ಗುಣ ಸಾರಥಿಯು
ಲೇಸಾಗಿ ಜನರ ನೋಡುವ ರತಿಯು
ಕರ್ಪುರದಾರತಿಯು
ವಾಸವಾಗಿರುವ ಈ ಶೇಷಾದ್ರಿಯಲಿ ಭೀ-
ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
***
ಎಷ್ಟು ಪೇಳಲಿ ವೆಂಕಟಗಿರಿಯ ankita bheemesha krishna
ರಾಗ : ಮೋಹನ ತಾಳ : ಆದಿ (raga tala may differ in audio)
ಯೆಷ್ಟು ಪೇಳಲಿ ವೆಂಕಟಗಿರಿಯ ।
ದೃಷ್ಟಿಗೆ ಬಹು ಸಿರಿಯ ।
ಬೆಟ್ಟವನೆ ಮನಸಿಟ್ಟೇರಲು ಬೇಡಿದ ।
ಇಷ್ಟಾರ್ಥಗಳ ಈಡಾಡುವ
ದೊರೆಯ ।। ಪಲ್ಲವಿ ।।
ಚಿತ್ರ ವಿಚಿತ್ರದ
ಮಹಾದ್ವಾರ ।
ಚಿನ್ನದ ಗೋಪುರ
ಸ್ವಚ್ಛವಾದ ಸ್ವಾಮಿ
ಪುಷ್ಕರಣಿಯ ತೀರ ।
ಸುತ್ತಲು ಪ್ರಾಕಾರ ।
ಹೆಚ್ಚಿನತೀ ವ್ರತವೆ
ಮನೋಹರ ।
ಮಾರುವ ವಿಸ್ತಾರಸ ।
ಚಿತ್ತಜನಯ್ಯನ
ಶೈಲವೆ ದೂರದಿಂದ ।
ಹತ್ತಿ ಬರುವುದೀತನ
ಪರಿವಾರ ।। ಚರಣ ।।
ರತ್ನ ಮಾಣಿಕ್ಯದ
ಕೇಯೂರ ।
ಕಟ್ಟಿದ ಉಡಿದಾರ ।
ಉಟ್ಟಿದ್ದ ನಿರಿಜರ
ಪೀತಾಂಬರ ।
ಕೌಸ್ತುಭ ಮಣಿಹಾರ ।
ಗಟ್ಟಿ ಕರ ಕಂಕಣ
ಕುಂಡಲಧರ ।
ಚತುರ್ಭುಜದಲಂಕಾರ ।
ವಕ್ಷ ಸ್ಥಳದಲ್ಲಿ
ಹೊಂದಿದ ಶ್ರೀ ಮಹಾ - ।
ಲಕ್ಷ್ಮೀದೇವಿಯರಿಂದೊಲಿವ
ಶೃಂಗಾರ ।। ಚರಣ ।।
ಆಕಾಶರಾಜನ ಕಿರೀಟ ।
ಚಿತ್ರವು ಬಹು ಮಾಟ ।
ಹಾಕಿದ್ದ ಹರಿ
ಕಡೆಗಣ್ಣಿನ ನೋಟ ।
ಭಕ್ತರ ಕುಣಿದಾಟ ।
ಬೇಕಾದ ಭಜಕರ
ಭವ ಪಡಿಪಾಟ ।
ಬಿಡಿಸುವ ಯಮ ಕಾಟ ।
ಕೋಟಿ ಜನರ
ಓಡ್ಯಾಟವೆ । ನ ।
ಮ್ಮ ಕಿರೀಟಿಯ
ಸಖ ಕೇಶವನ
ಮಂದಿರದೊಳ್ ।। ಚರಣ ।।
ತಪ್ಪುಗಾಣಿಕೆ ಬೇಡುವ ।
ಸರ್ಪ ಶೈಲದ ತಿಮ್ಮಪ್ಪ ।
ಕಪ್ಪವ ಕಾಸು
ಕವಡೆ ಮುಡುಪು ।
ಹಾಕದೆ ತಾನೊಪ್ಪ
ಜಪ್ಪಿಸಿ ನೋಡುವ
ಜನರ ತಪ್ಪ ।
ಹುಡುಕ್ಯಾಡುತಲಿಪ್ಪ
ಅಪ್ಪ ಮಹಿಮಾನಂತ
ಮೂರುತಿ । ತಾ ।
ನೊಪ್ಪಿದರೊಲಿದು
ಕೊಡುವ ಸಾರೂಪ್ಯ ।। ಚರಣ ।।
ದೇಶದೇಶದೊಳು
ಈತನ ವಾರುತೆಯು ।
ತುಂಬಿದ ಕೀರುತಿಯು ।
ಆಸೆಯ ದೈವ ಈ
ಮೂರುತಿಯು ।
ಫಲ್ಗುಣ ಸಾರಥಿಯು ।
ಲೇಸಾಗಿ ಜನರ
ನೋಡುವ ರೀತಿಯು ।
ಕರ್ಪೂರದಾರತಿಯು ।
ವಾಸವಾಗಿರುವ ಈ
ಶೇಷಾದ್ರಿಯಲಿ । ಭೀ ।
ಮೇಶ ಕೃಷ್ಣ ಶ್ರೀನಿವಾಸ
ಕೃಪಾಳು ।। ಚರಣ ।।
****
just scroll down for other devaranama
No comments:
Post a Comment