Wednesday, 1 September 2021

ಯಾತರಂಚಿಕೆ ಜಗದೊಳಗೆ ಜಗನ್ನಾಥ ದಾಸರ ದಯಪಡೆದ ಸುಜನರಿಗೆ ankita shyamasundara

 ..

ಯಾತರಂಚಿಕೆ ಜಗದೊಳಗೆ ಜಗ

ನ್ನಾಥ ದಾಸರ ದಯಪಡೆದ ಸುಜನರಿಗೆ ಪ


ಪದುಮಜಾಂಡದಿ ವಿಧಿ ಮದನಾರಿ ವಂದಿತ ಒ

ಲಿದು ಪತಿ ಮಧುರಿಫು ಹರಿಕೃತಾ

ಸುಧೆಸಾರ ಸುಗ್ರಂಥರಚಿಸಿದ ಗುರುಗಳ

ಪದ ಸರಸಿಜ ಪೊಂದಿದಸುಗುಣರಿಗೆ 1


ನಳಿನ ಜನಕನ ವÀಲಿಸಿ ಹರುಷದಿಂದಲಿ

ಥಳ ಥಳ ಪೊಲೆಯುವ ಸ್ತಂಭದಲಿ

ಕುಳಿತು ಸೇವಿಸುವರ ಸಲಹುವ ಶ್ರೀ ರಂಗ

ವಲಿದ ದಾಸಾರ್ಯರ ಒಲಿಮೆ ಉಳ್ಳವರಿಗೆ 2


ಸಿರಿವರ ಶಾಮಸುಂದರ ಸರ್ವೋತ್ತುಮ

ಮರುತಾತ್ಮಜ ಗುರುವರ್ಯಕಿಂದು

ಧರಿಯೊಳು ಸಾರಿದ ಸಲ್ಹಾದ ದಾಸರ

ಚರಣ ಸರೋರುಹ ನೆರೆನಂಬಿದವರಿಗೆ 3

***


No comments:

Post a Comment