ಥಟ್ಟನೆ ನಿಂತನು ರಾಯ
ಬಿಟ್ಟು ಸಿಂಹಾಸನ ಇಟ್ಟು ದ್ವಾರದಿ ಹೆಜ್ಜೆ ಪ.
ಸಭೆಯ ದ್ವಾರದಲೆ ವಿಬುಧ ಸಹಿತಾಗಿ
ಅಭಯ ಜನಕೆ ಕೊಟ್ಟು ನಭದ ಸೂರ್ಯನಂತೆ 1
ಮಾರನೈಯನ ದಯ ಅಪಾರವಾಗಲೆಂದು
ಬಾರಿ ಬಾರಿಗೆ ದ್ರವ್ಯ ಸೂರಿ ಮಾಡುತಲಾಗ 2
ವಾಯುದೇವರ ದಯ ಸೋಸಿಲೆ ನಮಗೆಂದು
ಸಾಸಿರ ಅರ್ಬುದ ದ್ರವ್ಯ ಆಸಮಯದಲೆ ಕೊಟ್ಟ 3
ಲಕ್ಷ್ಮಿದಯ ನಮಗೆ ಅಕ್ಷಯ ಇರಲೆಂದು
ಲಕ್ಷಕೋಟಿ ದ್ರವ್ಯ ಆಕ್ಷಣದಲಿ ಕೊಟ್ಟ 4
ಬಲರಾಮ ನಮಗಿನ್ನು ಸುಲಭವಾಗಲೆಂದು
ಬಲುಬಲುದ್ರವ್ಯ ಮೇಲೆ ಮೇಲೆ ಕೊಟ್ಟು 5
ಎಷ್ಟೆಷ್ಟು ಕಾಲಕ್ಕೆ ಕೃಷ್ಣನೆ ದೊರೆ ಎಂದು
ಶ್ರೇಷ್ಠದ ಭೇರಿಯ ಘಟ್ಯಾಗಿ ಹೊಯಿಸುತ 6
ಹಿಂದೆ ಮುದದಿಂದ ಬಂದ ರಾಮೇಶನು
ತಂದೆ ಬೊಮ್ಮಗೆ ದುಂದುಭಿ ಹೊಯಿಸುತ 7
****
No comments:
Post a Comment