Saturday, 11 December 2021

ಭಕ್ತರ ಬಿನ್ನಹ ಪರಾಕು ಭಾಗ್ಯದ ನಿಧಿಯೇ ಪರಾಕು ankita helavana katte BHAKTARA BINNAHA PARAAKU BHAAGYADA NIDHIYE PARAAKU



ಭಕ್ತರ  ಬಿನ್ನಹ  ಪರಾಕು.....
ಭಾಗ್ಯದ  ನಿಧಿಯೇ  ಪರಾಕು  ||ಪ||


ಶೇಷಶಯನ  ಶ್ರೀನಿವಾಸ  ಪರಾಕು
ಸಾಸಿರನಾಮದ  ಒಡೆಯ  ಪರಾಕು
ದೋಷ  ದುರಿತಹರ  ಸ್ವಾಮಿ  ಪರಾಕು
ಭಾಷೆ  ಪಾಲಿಪುದೆನ್ನ  ವಾಸುದೇವ  ಪರಾಕು ||    (ಭಕ್ತರ)

ನಿನ್ನ  ನಂಬಿದೆ  ನೀರಜಾಕ್ಷ  ಪರಾಕು
ನಿನ್ನ  ರನ್ನೆಯ  ಒಲುಮೆ  ಬೇಕು  ಪರಾಕು
ಅನ್ಯರ  ಸಂಗವನೊಲ್ಲೇ  ಪರಾಕು
ಎನ್ನಪೇಕ್ಷಯ  ಸಲಿಸೋ  ಪರಾಕು ||     (ಭಕ್ತರ)

ರತಿಪತಿಪಿತ  ಮಾಧವನೇ  ಪರಾಕು
ಅತಿರೂಪ  ಎನ್ನಯ್ಯನೇ  ಪರಾಕು
ಹಿತ ಉಂಟಾದರೇ  ಕಾಯೋ  ಪರಾಕು
ಕರ್ತೃ   ಹೆಳವನಕಟ್ಟೆ  ರಂಗ  ಪರಾಕು ||    (ಭಕ್ತರ)
****

No comments:

Post a Comment