//
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಧೀರ ಕುಮಾರ ಮಾರಾವತಾರ
ಪಾಹಿ ತ್ರ್ಯಂಬಕನ ಕುಮಾರ ಪ
ತಾರಕಾಸುರ ಸಂಹಾರ ದೇವ
ನಿನ್ನಲಿ ದೇವಸೈನ್ಯದ ಭಾರ
ಗಿರಿಜಾದೇವಿಯ ಮೋಹದ ಕುವರ
ಪೊರೆಯೊ ಎನ್ನನು ಕರುಣಾಸಾಗರ 1
ಅಮರಸೇನೆಗೆ ನೀನಗ್ರೇಸರ
ಭೂಸುರ ಹತ್ಯಾ ಪಾಪಸಂಹಾರ
ಸಮರದೊಳಗೆ ನೀನು ಶೂರ
ನಮಿಸುವರಿಗಿಷ್ಟ ಫಲವೀವ ವೀರ 2
ವಿಪ್ರಜನರಿಗತಿಪ್ರಿಯ
ವಲ್ಲೀಸೇನೆಗೆ ಪ್ರಾಣಪ್ರಿಯ
ವ್ಯಾಪ್ತ ರಾಜೇಶ ಹಯಮುಖನ
ಚಕ್ರಾಭಿಮಾನಿ ಮೂರುತಿಯಾಗುತಿರುವಿ 3
***
No comments:
Post a Comment