ಶ್ರೀ ಉರಗಾದ್ರಿವಿಠ್ಠಲರಿಗೆ ಸುಮಾರು 80 ಸುಜೀವಿಗಳಿಗೆ ಅಂಕಿತೋಪದೇಶದೊಂದಿಗೆ ದಾಸ ದೀಕ್ಷೆಯನ್ನು ನೀಡಿ ಹರಿದಾಸ ಪಂಥವನ್ನು ಮುಂದುವೆರಿಸಿದ್ದರೆ.( ಶ್ರೀ ತಂದೆ ವೆಂಕಟೇಶ ವಿಠ್ಠಲರಿಗೆ ) ನೀಡಿದ ಅಂಕಿತ ಪದ...
" ರಾಗ : ವಸಂತ ತಾಳ : ಆದಿ
ತಂದೆ ವೆಂಕಟೇಶನೆಂದೆ । ಪು ।
ರಂದರದಾಸರ ಪ್ರಿಯನಿವನೆಂದೆ ।। ಪಲ್ಲವಿ ।।
ಜನ್ಮ ಜನ್ಮಂಗಳಲಿ ತಂದೆ ।
ಎಂದೆಂದು ಭವ-
ಮೋಚನದೊಳು ತಂದೆ ।
ಇಂದು ವಿನಯದಿ ತಂದೆ ।।
ದಂದುಗೆ ಬಿಡಿಸೆಂದೇ ।
ನಿನ್ನ ಹೃನ್ಮ೦ದಿರಾ-
ರವಿಂದದೊಳು ನಿಂದೆ ।। ಚರಣ ।।
ಕಾಲ ಕಾಲದಿ ತಂದೆ ।
ವಾಕು ಮನಕೆ
ನಿಲುಕದಾಲಿಹೇ ತಂದೆ ।
ಬಾಲ್ಯ ಯೌವನ । ಜ ।।
ರಾಲಯಾದ್ಯವಸ್ಥೆಯ ತಂದೆ ।
ಕಾಲ ಕರ್ಮಗಳಲ್ಲಿ ಕಾರ್ಯ
ಪ್ರೇರಣೆಗೆಲ್ಲ ।। ಚರಣ ।।
ಚತುರ ರೂಪದಿ ನಿಂದೆ ।
ತಂದೆ ಚತುರ
ರೂಪದಿ ತಂದೆ ।
ನುತಿಪೆನೋ ಉರಗಾದ್ರಿ-
ವಾಸವಿಠ್ಠಲ । ಅ ।
ಪ್ರತಿಮಹಿಮಾ ಸೃಷ್ಠಿ
ಸ್ಥಿತಿ ಲಯಕೆಲ್ಲ ।। ಚರಣ ।।
***
No comments:
Post a Comment