Sunday, 5 December 2021

ಶಿವನೆ ನಾ ನಿನ್ನ ಕರೆಯುವೆ ಬಾರೊ ಗಿರಿಜಾ ankita indiresha SHIVANE NINNA KAREYUVE BAARO GIRIJA



ಶಿವನೆ ನಾ ನಿನ್ನ ಕರೆಯುವೆ ಬಾರೊ ಪ


ಗಿರಿಜಾಮನೋಹರನೆ ಶಂಕರನೆ ಅ.ಪ.


ತರುಣಿಮಣಿಯು ವಾಮತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರಸರಿತೆಯು ಜಟೋತ್ಪರಿ ಶೋಭಿಪಳುಗರಳಕಂಠದಿ ನೀಲ ಹರಳಿನಂತ್ಹೊಳೆವುದು 1

ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆಯ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತವ್ಯಾಳಚಲಾಂತಕ ಶ್ರೀಶೈಲದಿ ನಿಂತೆ 2

ಮಂದರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು ಮಂದಿರಕೋ ಇತಿ 3

****


No comments:

Post a Comment