Sunday 5 December 2021

ಮುಪ್ಪಿನ ಗಂಡನ ಒಲ್ಲೆ ನಾ ತಪ್ಪದೆ ಪಡಿಪಾಟ purandara vittala MUPPINA GANDANA OLLE NAA TAPPADE PADIPAATHA



ಪುರಂದರದಾಸರು
ರಾಗ ಆನಂದಭೈರವಿ ಅಟತಾಳ 
ಮುಪ್ಪಿನ ಗಂಡನ ಒಲ್ಲೆ ನಾ ||ಪ||

ಮುಪ್ಪಿನ ಗಂಡನ ಒಲ್ಲೆನು ನಾನು ||ಪ||
ತಪ್ಪದೆ ಪಡಿಪಾಟ ಪಡಲಾರೆನಕ್ಕ ||ಅ||

ಉದಯದಲ್ಲೇಳಬೇಕು ಉದಕ ಕಾಸಲುಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲುಬೇಕು
ಬಿದಿರುಕೋಲನು ತಂದು ಮುಂದೆ ಇಡಬೇಕಕ್ಕ ||

ಮೆತ್ತನೆ ರೊಟ್ಟಿ ಮುದ್ದೆಯ ಮಾಡಲುಬೇಕು
ಒತ್ತಿ ಒದರಿ ಕೂಗಿ ಕರೆಯಲುಬೇಕು
ವಾಕರಿಕೆಯು ಮೂಗಿನ ಸಿಂಬಳ
ಮತ್ತೆ ವೇಳೆಗೆ ಎದ್ದು ತೊಳೆಯಬೇಕಕ್ಕ ||

ಗೋಣಿ ಹಾಸಲುಬೇಕು ಬೆನ್ನ ಗುದ್ದಲುಬೇಕು
ಗೋಣು ಹಿಡಿದು ಮೇಲಕ್ಕೆತ್ತಬೇಕು
ಶ್ರೀನಿಧಿ ಪುರಂದರವಿಠಲನ್ನ ನೆನೆಯುತ್ತ
ನಾನೊಂದು ಮೂಲೇಲಿ ಒರಗಬೇಕಕ್ಕ ||
***

pallavi

muppina gaNDna ollenu nAnu

anupallavi

tappade paDipATa paDalArenakka

caraNam 1

udayadallELa bEku udaka kAsalu bEku badiyalli nAniddu baje areya bEku
hadanAgi ele suNNa aDige kuTTalu bEku bidirukOlanu tandu munde iDa bEkakka

caraNam 2

mettane roTTi muddeya mADalu bEku otti odari kUgi kareyalu bEku
vAkarikeyumUgina simbaLa matte vELege eddu toLeya bEkakka

caraNam 3

gONi hAsalu bEku benna guddalu bEku gONu hiDidu mElakketta bEku
shrInidhi purandara viTTalanna neneyutta nAnondu mUlEli oraga bEkakka
***

ಮುಪ್ಪಿನ ಗಂಡನ ಒಲ್ಲೆನೆ |
ತಪ್ಪದೆ ಪಡಿಪಾಟ ಪಡಲಾರೆನವ್ವ.ಪ.

ಉದಯದಲೇಳಬೇಕುಉದಕ ಕಾಸಲು ಬೇಕು |ಹದನಾಗಿ ಬಜೆಯನು ಅರೆದಿಡಬೇಕು ||ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |ಬಿದಿರಕೋಲು ತಂದು ಮುಂದಿಡಬೇಕು 1

ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು ||ಮೆತ್ತನವೆರಡು ಮುದ್ದಿಯ ಮಾಡಲುಬೇಕು |ಒತ್ತೊತ್ತಿ ಕೂಗಿ ಕರೆಯಲುಬೇಕು ....... 2

ಜಾಡಿ ಹಾಸಬೇಕು ನೋಡಿ ಬಾಡಬೇಕು |ಅಡಗಡಿಗೆ ಕಣ್ಣೀರ ಸುರಿಸಬೇಕು ||ಒಡೆಯ ಶ್ರೀ ಪುರಂದರವಿಠಲನ ನೆನೆಯುತ |ಮಿಡಿಗೊಂಡು ಮೂಲೆಗೆ ಒರಗಬೇಕು 3
**********

No comments:

Post a Comment