..
ಪೂರ್ಣಭೋಧ ಮುನಿರಾಯಾ ಎನ್ನಲಿ
ಕರುಣವ ಮಾಡಯ್ಯಾ ಪ
ಚರಣವ ನಂಬಿದ ತರುಣನ ಭವ
ಅರಣವ ದಾಟಿಸಿ ಶರಣನ ಪೊರೆಯೋ ಅ.ಪ
ನಿನ್ನ ಮತದಿ ದೀಕ್ಷಾ ಪೊಂದಿಸಿ
ನಿನ್ನ ಕರುಣ ಕಟಾಕ್ಷ
ನಿನ್ನ ಶಾಸ್ತ್ರದಲನನ್ಯ ಭಾವವ
ಮನ್ನಿಸೊ ದಿನದಿನ ಎನ್ನೊಳು ನೆಲೆಸಿದ್ದು 1
ಪಂಚಭೇದಮತಿಯಾ ತರತಮ
ಪಂಚಕ ಭಾವದ ಪರಿಯಾ
ವಂಚನೆÀ ಮಾಡದೆ ಪಂಚಿಕಿ ತಿಳಿಸೆಲೊ
ಮಂಚಿಗೆ ಮರುತ ವಿರಿಂಚಿಯಾಗುವಿ ನೀ 2
ಮಾತರಿಶ್ವ ಹನುಮಾ ಭೀಮಾ
ಯತಿನಾಥ ಮಧ್ವನಾಮಾ
ಖ್ಯಾತ ಮಾಯಿಮತ ವ್ರಾತವನಳಿದ
ದಾತಗುರುಜಗನ್ನಾಥ ವಿಠಲ ಪ್ರಿಯ 3
***
No comments:
Post a Comment