Friday, 15 October 2021

ಪರಿಪಾಹೀ ಪರಿಪಾಹೀ ದುರಿತಧ್ವಾಂತ ankta gurujagannatha vittala

  ರಾಗ –  :  ತಾಳ – 


ಪರಿಪಾಹೀ ಪರಿಪಾಹೀ ll ಪ ll


ದುರಿತಧ್ವಾಂತ ದಿವಾಕರ ನರಹರಿ ll ಅ ಪ ll


ದುರಳನ ಪೊಟ್ಟಿಯ ಕರುಳವ ಬಗಿದಾ l

ತರುಳನ ಪೊರದಿಹ  ಸರಳ ಮೂರುತಿ ll 1 ll


ಮೃತ್ಯು ಕುಲಕ ನೀ ಮೃತ್ಯುಯೆನಿಸುವಪ l

ಮೃತ್ಯು ಬಿಡಿಸು ಅಮರ್ತ್ಯರೋತ್ತುಮಾ ll 2 ll


ಉಗ್ರರೂಪ ಪರ ನಿಗ್ರಹಕಾರಿ ಸ l

ಮಗ್ರ ಭಕತರಿಗನುಗ್ರಹ ಮಾಡೀ ll 3 ll


ವೀರದಿತಿ ಕುಮಾರರ ಸದದೂ l

ಧಾರರ ಪೊರೆದಾತಾರ ಸಿಂಹ್ವನ ll 4 ll


ವಿಷ್ಣುನೆ ಹಿಂದಕ ಜಿಷ್ಣುನ ಪೊರದೀ ಸು l

ಧಿಷ್ಣು ಯನ್ನ ನೀ ವಧಿಷ್ಣುನ ಮಾಡಿ ll 5 ll


ಸುರಿಯುವ ಮುಖ ಪರರಿಗೆ ತೋರ್ಪುದು l

ಕಿರಿನಗೆ ಮೊಗ ಪೊರಿವೋದು ಯನ್ನನು ll 6 ll


ಭೀಷಣಕರದ ಭೀಷಣ ಜನಕೆ l

ಪೋಷಣ ಮಾಳ್ಪದ್ವಿಭೀಷಣನೈಯ್ಯಾ ll 7 ll


ಭದ್ರಮೂರುತಿ ಸುಭದ್ರಪತಿ ಸಖ l

ನಿದ್ರಹೀನೇಶನೆ ಸುಭದ್ರ ಮತಿಯನಿತ್ತು ll 8 ll


ಧಾತಪ್ರಮುಖ ಸುರನಾಥ ವಿನುತ ಪದ l

ದಾತ ಗುರುಜಗನ್ನಾಥವಿಟ್ಠಲನೆ ll 9 ll

***


No comments:

Post a Comment