Wednesday, 4 December 2019

ಎಂತಹ ಸಣ್ಣವನೆ ನಿನ್ನ ಮಗನಂತಹ purandara vittala

ಪುರಂದರದಾಸರು
ರಾಗ -  :  ತಾಳ - 

ಎಂತಹ ಸಣ್ಣವನೆ ನಿನ್ನ ಮಗನಂತಹರೆಲ್ಲಿಲ್ಲವೆ l
ಹೊಂತಕಾರಿ ಬಲವಂತರಿಗಧಿಕನು ll ಪ ll

ತರಳನಂತಿಪ್ಪನು ತರಳೆಯರೊಡನಾಡುವ l
ಕಿರುಬೆರಳುಗುರಲಿ ಗಿರಿಯನೆತ್ತಿದವ ll ೧ ll

ಕಾಳಿಯ ಸರ್ಪನ ಕಾಲಲ್ಲಿ ತುಳಿದವ l
ಪಲಾಯನ ಮಾಡಿ ಕಾಲಯವನನ ಸುಟ್ಟ ll ೨ ll

ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ l
ರಚ್ಚೆ ಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ ll ೩ ll

ಬಾಯಿ ತೆರೆದನಲ್ಲೆ ನೀನಂಜುವಂದದಿ l
ಆ ಯಮಳಾರ್ಜುನರಾಯಾಸ ಬಡಿಸಿದ ll ೪ ll

ದಿಟ್ಟತನದಿ ಮೊಲೆಗೊಟ್ಟವಳನು ಕೊಂದ l
ಪುಟ್ಟ ಪುರಂದರವಿಟ್ಠಲರಾಯನು ll ೫ ll
**

ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |
ಹೊಂತಕಾರಿಬಲವಂತರಿಗಧಿಕನು ಪ

ತರಳನಂತಿಪ್ಪನು ತರಳೆಯರೊಡನಾಡುವ |
ಕಿರುಬೆರಳುಗುರಲಿ ಗಿರಿಯನೆತ್ತಿದವ 1

ಕಾಳಿಯ ಸರ್ಪನ ಕಾಲಲ್ಲಿ ತುಳಿದವ |
ಪಲಾಯನ ಮಾಡಿ ಕಾಲಯವನನ ಸುಟ್ಟ 2

ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |
ರಚ್ಚೆಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ3

ಬಾಯಿ ತೆರೆದನಲ್ಲೆ ನೀನಂಜುವಂದದಿ |
ಆಯಮಳಾರ್ಜುನರಾಯಾಸ ಬಿಡಿಸಿದ 4

ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |
ಪುಟ್ಟ ಪುರಂದರವಿಠಲರಾಯನು 5
******

No comments:

Post a Comment