ಪುರಂದರದಾಸರು
ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ಪ
ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ಅ.ಪ
ಪವಿತ್ರೋದಕದಿಪಾದತೊಳೆವೆನೆಂತೆಂದರೆ |ಪಾವನೆಯಾದ ಗಂಗೆ ಪಾದೋದ್ಭವೆ ||ನವಕುಸುಮವ ಸಮರ್ಪಿಸುವೆನೆಂದರೆ ಉದುಭವಿಸಿಹನುಅಜನಿನ್ನ ಪೊಕ್ಕುಳ ಹೂವಿನಲಿ1
ದೀಪವನು ಬೆಳಗುವೆನೆ ನಿನ್ನಕಂಗಳುಸಪ್ತದ್ವೀಪಂಗಳೆಲ್ಲವನು ಬೆಳೆಗುತಿಹವೋ ||ಆಪೋಶನವನಾದರೀವೆನೆಂತೆಂಬೆನೆಆಪೋಶನವಾಯ್ತು ಏಳು ಅಂಬುಧಿಯು 2
ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆರಾಣಿವಾಸವು ಸಿರಿದೇವಿ ನಿನಗೆ ||ಮಾಣದೆಮನದೊಳು ನಿನ್ನ ನಾಮಸ್ಮರಣೆಧ್ಯಾನವನು ದಯೆ ಮಾಡೋ ಪುರಂದರವಿಠಲ 3
*******

No comments:
Post a Comment