ಲಕ್ಷ್ಮಿದೇವಿಯೆ ಬಾರೆ ಮನೆಗೆ
ಲಕ್ಷಿಯಿಟ್ಟು ನೋಡಿ ಹರಸೆ ನಮಗೆ||ಪಲ್ಲ||
ಅರಸು ಧರ್ಮರಾಯನರಸಿ ದ್ರೌಪತೀಗೆ
ಭರದಿ ಸೀರೆ ಅಕ್ಷಯ ಮಾಡಿದವನ ಮಡದಿ
ಕರಿಯ ಮೊರೆಯ ಕೇಳಿ ತ್ವರದಿ ಓಡಿಬಂದ
ಹರಿಯ ರಾಣಿ ಲಕ್ಷ್ಮಿ ದೇವಿ ಬಾರೆ ಮನೆಗೆ||೧||
ಮಿಂದು ಮಡಿಯನುಟ್ಟು ಬಂದ ಪರಿವಾರವು
ಮಂದಗಮನೆ ನಮ್ಮ ಸದನಕ್ಕೆ ಬಾರೆಂದು
ಒಂದೇ ಮನಸಿನಿಂದ ಬಂದು ಕರೆಯುವೋರೆ
ಸಂದೇಹವಿಲ್ಲದೆ ಬೇಡುವೋರೆ ಬಂದು||೨||
ಹದಿನಾರು ಸಾವಿರ ಚದುರೆಯರ ಅರಸ
ಪದುಮನಾಭನ ರಾಣಿ ಪಾಲಿಸೆಂದೆನುತ
ಒದಗಿ ಬಂದಾಪತ್ತು ಗಳನೆ ಕಳಿ ಎಂದೆನುತ
ಮಧ್ವೇಶಕೃಷ್ಣನ ರಾಣಿ ಗೊಂದಿಸುತ್ತ||೩||
***
No comments:
Post a Comment